More

    ಕಂಗನಾ ಕಚೇರಿ ನೆಲಸಮ ವಿರುದ್ಧ ನೆಟ್ಟಿಗರ ಆಕ್ರೋಶ: ಟ್ವಿಟರ್​ನಲ್ಲಿ ಟ್ರೆಂಡ್​ ಆದ ಹ್ಯಾಶ್​ಟ್ಯಾಗ್​ಗಳಿವು…​

    ನವದೆಹಲಿ: ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾತನಾಡಿದ ಬೆನ್ನಲ್ಲೇ ಶಿವಸೇನೆ ನೇತೃತ್ವದ ಸರ್ಕಾರ ಮುಂಬೈನಲ್ಲಿರುವ ಕಂಗನಾ ರಣಾವತ್​ ಕಚೇರಿಯನ್ನು ಹೊಡೆದುರುಳಿಸುತ್ತಿದೆ. ಇದರ ಬೆನ್ನಲ್ಲೇ ಟ್ವಿಟರ್​ನಲ್ಲಿ ಆಕ್ರೋಶದ ಸುರಿಮಳೆಯಾಗುತ್ತಿದ್ದು, ಅನೇಕ ನೆಟ್ಟಿಗರು ಕಂಗನಾ ಬೆಂಬಲಿಸಿ, ಸರ್ಕಾರದ ಕ್ರಮವನ್ನು ಟೀಕಿಸುತ್ತಿದ್ದಾರೆ.

    ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ನೆಟ್ಟಿಗರು ಖಂಡಿಸಿದ್ದಾರೆ. ಒಂದೆಡೆ ಸರ್ಕಾರ ಕಂಗನಾ ಕಚೇರಿಯನ್ನು ಕೆಡವುತ್ತಿದ್ದರೆ, ಮತ್ತೊಂದೆಡೆ ಜಾಲತಾಣದಲ್ಲಿ #DeathOfDemocracy (ಪ್ರಜಾಪ್ರಭುತ್ವದ ಸಾವು), #KanganaRanaut #ISupportKanganaRanaut (ನಾನು ಕಂಗಾನರನ್ನು ಬೆಂಬಲಿಸುತ್ತೇನೆ) ಮತ್ತು #ShameOnBMC (ಮುಂಬೈ ಮಹಾನಗರ ಪಾಲಿಕೆಗೆ ನಾಚಿಕೆಯಾಗಬೇಕು) ಹ್ಯಾಶ್​ಟ್ಯಾಗ್​ಗಳ ಟ್ರೆಂಡಿಂಗ್​ನಲ್ಲಿವೆ.

    ವಿವಿಧ ಮೀಮ್​ಗಳ ಮೂಲಕ ಸರ್ಕಾರದ ಕ್ರಮವನ್ನು ಜಾಲತಾಣಿಗರು ಟೀಕಿಸುತ್ತಿದ್ದಾರೆ. ಹೆಣ್ಣು ಮಗಳ ವಿರುದ್ಧ ಒಂದು ಸರ್ಕಾರವೇ ನಿಂತಿದೆ. ನಿಮಗೆ ನಾಚಿಕೆಯಾಗಬೇಕು. ಹೋಗಿ ಬಳೆ ತೊಟ್ಟಿಕೊಳ್ಳಿ ಎಂಬಂತೆ ಟ್ರೋಲ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಆತ್ಮಹತ್ಯೆಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ: ಬಯಲಾಯ್ತು ಟಿಕ್​ಟಾಕ್​ ಗೆಳೆಯನ ಕರಾಳ ಮುಖ?!

    ಸೋಮವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ಕಂಗನಾ ಅವರ ಕಚೇರಿಗೆ ಭೇಟಿ ನೀಡಿ, ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸೀಲ್​ ಮಾಡಿದ್ದರು. ಅಲ್ಲದೆ, ಪರಿಶೀಲನೆ ಬಳಿಕ 14 ನಿಯಮ ಉಲ್ಲಂಘನೆಗಳ ಪಟ್ಟಿ ಸಹ ಮಾಡಿದ್ದರು. ನೆಲಸಮ ಮಾಡುವುದಾಗಿಯೂ ನೋಟಿಸ್​ ಸಹ ಹೊರಡಿಸಿದ್ದರು. ಅದರಂತೆ ಅವರ ಕಚೇರಿಯನ್ನು ಇಂದು ಮಹಾ ಸರ್ಕಾರ ಹೊಡೆದುರುಳಿಸುತ್ತಿದೆ.

    ಸೋಮವಾರ ನೀಡಿದ್ದ ನೋಟೀಸ್​ನಲ್ಲಿ ಹೇಗೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್​ಗೆ ಉತ್ತರ ಕೊಡದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್​ನಲ್ಲಿ ಹೇಳಲಾಗಿತ್ತು.

    ಬೃಹತ್​ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಟ್ವಿಟರ್​ ಅಕೌಂಟ್​ ಮೂಲಕ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮುಂಬೈ ಆಫೀಸ್​ ತೋರಿಸಿರುವ ಅವರು, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದರು.

    ಇದನ್ನೂ ಓದಿ: ಒಂದೇ ಕೊಠಡಿಯಲ್ಲಿ ಮಾದಕ ನಟಿಯರು: ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡ ಸಂಜನಾ-ರಾಗಿಣಿ?!

    ‘ಇದು ನನ್ನ ‘ಮಣಿಕರ್ಣಿಕಾ’ ಆಫೀಸ್​. ಈ ಆಫೀಸ್ ಸ್ಥಾಪಿಸುವುದಕ್ಕೆ ನನ್ನ 15 ವರ್ಷಗಳ ಪರಿಶ್ರಮವಿದೆ. ನನ್ನದೇ ಸ್ವಂತದ್ದೊಂದು ಆಫೀಸ್​ ಮಾಡಿಕೊಳ್ಳಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಆ ಕನಸನ್ನು ನುಚ್ಚುನೂರು ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದರು.

    ಮುಂಬೈ ಅನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದೇ ಕಂಗನಾಗೆ ಮುಳುವಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಸಹ ಕಿಡಿಕಾರಿ, ಮುಂಬೈನಲ್ಲೇ ಜೀವನ ಕಟ್ಟಿಕೊಂಡು ಇದೀಗ ಮುಂಬೈ ಮೇಲೆ ಕೃತಜ್ಞತಾ ಭಾವ ಇಲ್ಲದಿರುವುದು ಸರಿಯಲ್ಲ ಎಂದು ಜರಿದಿದ್ದಾರೆ. (ಏಜೆನ್ಸೀಸ್​)

    ಕಂಗನಾ ಕಚೇರಿ ನೆಲಸಮ: ಕಾರ್ಯಾಚರಣೆಗಿಳಿದ ಜೆಸಿಬಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts