ಸಮೋಸಾ, ಜಿಲೇಬಿ ತಿನಿಸುಗಳ ಬಗ್ಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು PIB ಸ್ಪಷ್ಟನೆ! PIB

PIB
Published on

PIB: ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸಮೋಸಾ, ಜಿಲೇಬಿ, ಲಡ್ಡೂ ಮೇಲೆ ಎಚ್ಚರಿಕೆ ಲೇಬಲ್ ಹೊಂದುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾರಾಟಗಾರರಿಗೆ ಹೇಳಿದೆ ಎನ್ನುವುದು ಸುಳ್ಳು ಎಂದು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಮಂಗಳವಾರ (ಜು.15) ಹೇಳಿದೆ.

‘X’ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿರುವ ಪಿಐಬಿ ‘ಕೇಂದ್ರ ಆರೋಗ್ಯ ಸಚಿವಾಲಯ ಯಾವುದೇ ಭಾರತೀಯ ಆಹಾರ ಉತ್ಪನ್ನಗಳ ಮೇಲೆ ಲೇಬಲ್ ಹೊಂದುವಂತೆ ಮಾರಾಟಗಾರರಿಗೆ ಎಚ್ಚರಿಕೆ ನೀಡಿಲ್ಲ. ಲೇಬಲ್ ಹಾಕುವಂತೆ ಎಚ್ಚರಿಕೆ ನೀಡಿದೆ ಎನ್ನುವ ವರದಿಗಳು ಸುಳ್ಳು’ ಎಂದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಆದೇಶ ಹಿನ್ನೆಲೆ ನಾಗ್ಪುರ AIIMS ತಜ್ಞರು ಭಾರತೀಯ ತಿಂಡಿಗಳ ಬಗ್ಗೆ ಅಧ್ಯಯನ ನಡೆಸಿದ್ದು, ಎಣ್ಣೆ & ಸಕ್ಕರೆ ಬಳಸಿ ತಯಾರಿಸಿದ ತಿಂಡಿಗಳಲ್ಲಿ ಕೊಬ್ಬು, ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಜಂಕ್​ ಫುಡ್​ ರೀತಿ ಸಮೋಸಾ, ಜಿಲೇಜಿ, ಲಡ್ಡು ತಿನಿಸು ಪದೇಪದೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಹಲವು ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಎಚ್ಚರಿಸಿದೆ ಎಂದು ವರದಿಗಳು ಹರಿದಾಡಿದ್ದವು.

ಸಿಗರೇಟ್ ಮೇಲೆ ಇರುವಂತೆ ತಿನಿಸುಗಳ ಮೇಲೆಯೂ ದುಷ್ಪಾರಿಣಾಮಗಳ ಎಚ್ಚರಿಕೆ ಲೇಬಲ್ ಅಂಟಿಸುವಂತೆ ಸೂಚಿಸಿಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ ಎಂದು ವರದಿ ಹರಿದಾಡಿದ್ದವು. ಈಗ ಅಂತಹ ಯಾವ ಎಚ್ಚರಿಕೆಯನ್ನ ಆರೋಗ್ಯ ಸಚಿವಾಲಯ ನೀಡಿಲ್ಲ ಎಂದು PIB ಸ್ಪಷ್ಟನೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net