

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಬಿಳಿ ಮತ್ತು ಕೆಂಪು ಬಣ್ಣವುಳ್ಳ ಸೀಬೆ ಹಣ್ಣಿನ ಸೇವನೆಯು ನಮ್ಮ ಆರೋಗ್ಯಕ್ಕೆ ಒಂದಲ್ಲ, ಎರಡಲ್ಲ ಹತ್ತು ಹಲವು ಪ್ರಯೋಜನಗಳನ್ನು ನೀಡುತ್ತದೆ. ವರ್ಷದ ಪೂರ ಸಿಗದೆ ಹೋದರೂ ಕನಿಷ್ಠ ಮೂರರಿಂದ ನಾಲ್ಕು ತಿಂಗಳ ಕಾಲ ಹೇರಳವಾಗಿ ಲಭ್ಯವಾಗುತ್ತದೆ. ಅದು ಮಳೆಗಾಲದ ಆಸುಪಾಸಿನಲ್ಲಿ ಹೆಚ್ಚು.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಈ ಸಮಸ್ಯೆ ಇರುವವರು ತಾವು ಸೇವಿಸುವ ಆಹಾರಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ತಿನ್ನುವ ಪ್ರತಿಯೊಂದು ಆಹಾರವು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ, ಮುನ್ನೆಚ್ಚರಿಕೆಗಳು ಅತ್ಯಗತ್ಯ. ಎಲ್ಲಾ ಹಣ್ಣುಗಳು ನಮ್ಮ ದೇಹಕ್ಕೆ ಉತ್ತಮವೇ. ಆದರೆ, ಪೇರಳೆ ಹಣ್ಣಿನ ಸೇವನೆ ಒಂದು ಕೈ ಜಾಸ್ತಿ ಎಂದೇ ಹೇಳಬಹುದು.
ವಿಶೇಷವಾಗಿ ಮಧುಮೇಹ ರೋಗಿಗಳಿಗೆ ಇದು ಹೇಳಿ ಮಾಡಿಸಿದ ಹಣ್ಣು. ಅನೇಕ ಜನರಿಗೆ ಇಂದಿಗೂ ಈ ಬಗ್ಗೆ ಕಾರಣ ಗೊತ್ತಿಲ್ಲ. ಇದರಲ್ಲಿನ ಸಿಹಿ ಅಂಶ ಮಧುಮೇಹಿಗಳಿಗೆ ಸಮಸ್ಯೆ ತಂದಿಡುತ್ತದೆ ಎಂದು ಭಾವಿಸುವವರೇ ಹೆಚ್ಚು. ಅಸಲಿಗೆ ಸಕ್ಕರೆ ಕಾಯಿಲೆ ಇರುವವರು ಪೇರಳೆ ತಿನ್ನಬಹುದೇ? ತಿಂದರೆ ಏನಾಗುತ್ತದೆ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ವಿವರ ಹೀಗಿದೆ ಗಮನಿಸಿ.
ಕ್ಯಾಲೋರಿ: ಕಡಿಮೆ
ಸಕ್ಕರೆ ಅಂಶ: ಕಡಿಮೆ (ತೀರ ಹಣ್ಣಾದ ಪೇರಳೆಯಲ್ಲಿ ಸ್ವಲ್ಪ ಹೆಚ್ಚು)
ನಾರಿನಾಂಶ: ಅಧಿಕ
ವಿಟಮಿನ್ ಸಿ: ಅಧಿಕ
ಆಂಟಿಆಕ್ಸಿಡೆಂಟ್‌ಗಳು: ಅಧಿಕ
1. ರಕ್ತದಲ್ಲಿನ ಸಕ್ಕರೆ ನಿಯಂತ್ರಣ: ಸೀಬೆಯಲ್ಲಿರುವವ ಆಹಾರದ ನಾರು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ರಕ್ತಕ್ಕೆ ಗ್ಲೂಕೋಸ್ ಬಿಡುಗಡೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಇದು ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ.
2. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ: ಪೇರಳೆ ಹಣ್ಣುಗಳು ತುಂಬಾ ಕಡಿಮೆ GI (ಗ್ಲೈಸೆಮಿಕ್ ಸೂಚ್ಯಂಕ) ಹೊಂದಿರುತ್ತವೆ. ಇದು 12ರಿಂದ 14ರವರೆಗೆ ಇರಬಹುದು. ಆದ್ದರಿಂದ, ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಏರಿಸುವುದಿಲ್ಲ.
ಇದನ್ನೂ ಓದಿ: ಭೂಸ್ವಾಧೀನ ಕೈಬಿಡುವ ಮುನ್ನ ರೈತರಿಗೆ ಸಿಎಂ ಹೇಳಿದ್ದೇನು? ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಗಳಿವು3. ಉತ್ಕರ್ಷಣ (antioxidants) ನಿರೋಧಕಗಳಲ್ಲಿ ಅಧಿಕ: ಪೇರಳೆಯು ವಿಟಮಿನ್ ಸಿ, ಲೈಕೋಪೀನ್ ಮತ್ತು ಪಾಲಿಫಿನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇವು ಮಧುಮೇಹದಿಂದ ಉಂಟಾಗುವ ಜೀವಕೋಶದ ಹಾನಿಯನ್ನು ಕಡಿತಗೊಳಿಸುತ್ತದೆ.
4. ಇನ್ಸುಲಿನ್ ಕಾರ್ಯವನ್ನು ಬೆಂಬಲಿಸುತ್ತದೆ: ಸೀಬೆ ಹಣ್ಣುಗಳು ಮಾತ್ರವಲ್ಲದೆ ಅದರ ಎಲೆಗಳು ಸಹ ಆರೋಗ್ಯಕರವಾಗಿವೆ. ಕೆಲವು ಅಧ್ಯಯನಗಳ ಪ್ರಕಾರ, ಪೇರಳೆ ಎಲೆಗಳಲ್ಲಿರುವ ಜೀವಸತ್ವಗಳು ಮತ್ತು ಫೈಟೊಕೆಮಿಕಲ್‌ಗಳು ಇನ್ಸುಲಿನ್ ಪರಿಣಾಮಕಾರಿತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
1. ಅತಿಯಾಗಿ ತಿನ್ನುವುದು ಅಪಾಯಕಾರಿ: ಮಾಗಿದ ಪೇರಳೆಯಲ್ಲಿರುವ ನೈಸರ್ಗಿಕ ಫ್ರಕ್ಟೋಸ್, ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅವುಗಳನ್ನು ಹೆಚ್ಚು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ.
2. ಬಿಸಿ ಆಹಾರದೊಂದಿಗೆ ಸೇವಿಸಬೇಡಿ: ಪೇರಳೆಯನ್ನು ಬಿಸಿ ಆಹಾರದೊಂದಿಗೆ ತಿನ್ನುವುದು ಸೂಕ್ತವಲ್ಲ. ಬಿಸಿ ಪದಾರ್ಥಗಳೊಂದಿಗೆ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.