ಸದ್ಯ ಸೌದಿ-ಭಾರತ ವೈಮಾನಿಕ ಪ್ರಯಾಣಕ್ಕಿಲ್ಲ ಅವಕಾಶ

Flight
Published on

ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಹಾಗೂ ಭಾರತದಿಂದ ಸೌದಿ ಅರೇಬಿಯಾಗೆ 'ಹಾರಾಡುವವರಿಗೆ' ಸದ್ಯ ನಿರ್ಬಂಧ ವಿಧಿಸಲಾಗಿದೆ. ಅರ್ಥಾತ್​, ಸೌದಿ-ಭಾರತ ಮಧ್ಯೆ ವಿಮಾನ ಪ್ರಯಾಣಕ್ಕೆ ಮಂಗಳವಾರದಿಂದಲೇ ನಿಷೇಧ ಹೇರಲಾಗಿದೆ.

ಭಾರತ ಸೇರಿ ಹಲವೆಡೆ ಕರೊನಾ ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸೌದಿ ಅರೇಬಿಯಾದ ವೈಮಾನಿಕ ಪ್ರಾಧಿಕಾರ ಆದೇಶ ಹೊರಡಿಸಿದೆ.


ಸೌದಿಯಿಂದ ಭಾರತ, ಬ್ರೆಜಿಲ್​ ಹಾಗೂ ಅರ್ಜೆಂಟೀನಾಗಳಿಗೆ ಬರುವ-ಹೋಗುವ ವಿಮಾನಗಳನ್ನು ನಿಷೇಧಿಸಲಾಗಿದೆ. ಆದರೆ ಸರ್ಕಾರಿ ಆಹ್ವಾನ ಇರುವ ಪ್ರಯಾಣಿಕರಿಗೆ ವಿನಾಯಿತಿ ಇದೆ ಎಂದು ಅದು ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net