ಈ ಬಾರಿಯೂ ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪ್ರವೇಶವಿಲ್ಲ

mecca
Published on

ಮೆಕ್ಕಾ : ಕರೊನಾ ಬಿಕ್ಕಟ್ಟಿನಿಂದಾಗಿ ಈ ವರ್ಷ ಕೂಡ, ಮುಸಲ್ಮಾನರು ಪವಿತ್ರ ಕರ್ತವ್ಯ ಎಂದು ನಂಬುವ ಹಜ್ಜ್​ ಯಾತ್ರೆಗೆ, ಹೊರದೇಶವರಿಗೆ ಪ್ರವೇಶವಿಲ್ಲದಂತಾಗಿದೆ. ಹಜ್ಜ್ ಯಾತ್ರೆಗೆ ಸೌದಿ ಅರೇಬಿಯಾದ ನಿವಾಸಿಗಳಾದ 60 ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಸೌದಿ ಅರೇಬಿಯಾದ ಹಜ್ಜ್ ಮತ್ತು ಉಮ್ರಾಹ್ ಸಚಿವಾಲಯಗಳು ನಿರ್ಧಾರ ತೆಗೆದುಕೊಂಡಿವೆ ಎಂದು ಸೌದಿ ಪ್ರೆಸ್​ ಏಜೆನ್ಸಿ ವರದಿ ಮಾಡಿದೆ. ಕಳೆದ ವರ್ಷ ಕೇವಲ 1,000 ಜನರನ್ನು ಭಾಗವಹಿಸಲು ಆಯ್ಕೆ ಮಾಡಲಾಗಿತ್ತು. ಈ ವರ್ಷ ಜುಲೈ ತಿಂಗಳ 17 ರಿಂದ 22 ರವರೆಗೆ ಹಜ್ಜ್​ ಯಾತ್ರೆಯ ಸಮಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net