ಶಂಕಿತ ಕರೊನಾ ಸೋಂಕಿತ ಸಾಗರದ ಮಹಿಳೆಯ ವೈದ್ಯಕೀಯ ವರದಿಯಲ್ಲಿ ಬಯಲಾಯ್ತು ಈ ಸತ್ಯ...

Coronavirus 12 Feb 20
Published on

ಶಿವಮೊಗ್ಗ: ಸಾಗರ ತಾಲೂಕಿನ ಮಹಿಳೆಯೋರ್ವರಿಗೆ ಕರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಸಹರಾ ಬಾನು (69) ಎಂಬುವರು ಕರೊನಾಗೆ ತುತ್ತಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು.

ಆದರೆ ಈಗ ಮಹಿಳೆಗೆ ಕರೊನಾ ತಗುಲಿಲ್ಲ ಎಂಬುದು ರಕ್ತಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ. ಉಸಿರಾಟದ ತೊಂದರೆಯಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ರಕ್ತದ ಮಾದರಿಯನ್ನು ಶಿವಮೊಗ್ಗ ಮೆಡಿಕಲ್​ ಕಾಲೇಜಿನ ವಿಡಿಆರ್​ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಲಾಗಿತ್ತು.

ಇಂದು ಬೆಳಗ್ಗೆ ವರದಿ ಬಂದಿದ್ದು, ಕರೊನಾ ಇಲ್ಲ ಎಂಬುದು ಗೊತ್ತಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net