ನಿಂದನೆ ಆರೋಪ ಪ್ರಕರಣದ ಸಿಐಡಿ ತನಿಖೆಯಲ್ಲಿ ವಿಶ್ವಾಸವಿಲ್ಲ: ಸಿ.ಟಿ.ರವಿ | Political motivated move

25 ckm 1 c.t.ravi
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ
Published on

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿರುವ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನಡೆಯುತ್ತಿರುವ ತನಿಖೆಯಲ್ಲಿ ಯಾವುದೇ ವಿಶ್ವಾಸವಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಸಚಿವರು ನೀಡಿದ ದೂರಿನಂತೆ ತಕ್ಷಣ ಎ್ಐಆರ್ ದಾಖಲಾಗುತ್ತದೆ. ಆದರೆ ಪೊಲೀಸರು ನನ್ನ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಸಲ್ಲಿಸಿದ ದೂರಿನ ಸಂಬಂಧ ಎ್ಐಆರ್ ಈವರೆಗೂ ದಾಖಲಾಗಿಲ್ಲ.

ಸಭಾಪತಿ, ಡಿಜಿಪಿಗೂ ದೂರು ಸಲ್ಲಿಸಿಯಾಗಿದೆ. ಸಭಾಪತಿಯವರು ಕರೆದು ಹೇಳಿಕೆ ಪಡೆದು, ಎಲ್ಲ ಪರಿಶೀಲಿಸಿ ರೂಲಿಂಗ್ ನೀಡಿಯಾಗಿದೆ. ಸಂವಿಧಾನ, ಕಾನೂನು ಪ್ರಕಾರ ಸಭಾಪತಿ ರೂಲಿಂಗ್ ಅಂತಿಮವಾಗಿದ್ದು, ಪ್ರತ್ಯೇಕವಾದ ತನಿಖೆ ಅಗತ್ಯವೇ ಇಲ್ಲವೆಂದು ಪ್ರತಿಪಾದಿಸಿದರು.

ರಾಜಕೀಯ ದಾಳ

ನಾನು ಕೊಟ್ಟ ದೂರಿನ ಪ್ರಕಾರ ಎ್ಐಆರ್ ದಾಖಲಿಸಿಲ್ಲ, ಸಚಿವರು ದೂರಿನ ಪ್ರಕಾರ ಎ್ಐಆರ್ ದಾಖಲಾಗಿ ಸಿಐಡಿಯವರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಈವರೆಗೂ ನೋಟಿಸ್ ನೀಡಿಲ್ಲ ಎಂಬುದು ಗಮನಿಸಿದರೆ ಇದೊಂದು ರಾಜಕೀಯ ದಾಳವೆಂಬುದು ನಿಚ್ಚಳವಾಗಿದೆ ಎಂದು ಸಿ.ಟಿ.ರವಿ ದೂರಿದರು.

ಪೊಲೀಸರು ಪಕ್ಷಪಾತ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಯಾವುದೇ ದಾಖಲೆಗಳು ಇಲ್ಲವೆಂದು ಸಭಾಪತಿ ಸ್ಪಷ್ಟಪಡಿಸಿದ್ದಾರೆ. ಯಾವುದೋ ನಕಲಿ ವಿಡಿಯೋ ಇಟ್ಟುಕೊಂಡು ತನಿಖೆ ಮಾಡುವುದಿದ್ದರೆ ನನ್ನದೇನೂ ಅಭ್ಯಂತರವಿಲ್ಲ. ಯಾವತಿದ್ದರೂ ನನ್ನದೇ ಜಯವೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆದಿದ್ದ ಜಂಟಿ ಸಭೆಯಲ್ಲಿ ದತ್ತಪೀಠವೇ ಬೇರೆ, ಬಾಬಾ ಬುಡನ್‌ಗಿರಿ ದರ್ಗಾ ಬೇರೆ ಸರ್ವೇ ನಂಬರ್‌ನಲ್ಲಿವೆ ಎಂದು ತಿಳಿಸಿದ್ದು, ದರ್ಗಾದಲ್ಲಿ ಸೂಫಿ ಪಂಥದ ಎಲ್ಲವನ್ನು ಅನುಷ್ಠಾನಗೊಳಿಸಿ, ದತ್ತಾತ್ರೇಯ ಪೀಠದಲ್ಲಿ ಹಿಂದು ಪದ್ಧತಿಗೆ ಮಾತ್ರ ಅವಕಾಶ ಕೊಡಿ, ದಾಖಲೆ ಆಧರಿಸಿ ಕ್ರಮಕೈಗೊಳ್ಳಲು ವಿನಂತಿಸಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net