ಗ್ರಾಮ ಕೊಚ್ಚಿ ಹೋಗಿ ಎರಡು ವರ್ಷವಾದ್ರೂ ಪರಿಹಾರವಿಲ್ಲ! ನಾಡಕಛೇರಿ ಮುಂದೆ ಮೌನ ಪ್ರತಿಭಟನೆ

1150387
Published on

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮ ಗುಡ್ಡ ಕುಸಿತದಿಂದ ಕೊಚ್ಚಿ ಹೋಗಿ ಇಂದಿಗೆ ಎರಡು ವರ್ಷ. ಆದರೆ ಈವರೆಗೆ ನಿರಾಶ್ರಿತರಾದ ಗ್ರಾಮಸ್ಥರಿಗೆ ಪುನರ್ವಸತಿಯಿರಲಿ, ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಲೆಮನೆ ಗ್ರಾಮಸ್ಥರು ಇಂದು (ಆಗಸ್ಟ್​ 9) ಜಾವಳಿಯ ನಾಡಕಛೇರಿ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

2019 ರ ಅಗಸ್ಟ್ 9 ರಂದು ಗುಡ್ಡ ಕುಸಿತಕ್ಕೆ ನಲುಗಿದ್ದ ಮಲೆಮನೆ ಗ್ರಾಮ, ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈವರೆಗೆ ಹಲವು ಸಚಿವರು ಭೇಟಿ ನೀಡಿ ಜಮೀನು, ಮನೆ ನೀಡುವುದಾಗಿ ಭರವಸೆ ನೀಡಿದ್ದರೂ ಸಹ, ಯಾವುದೇ ಸಹಾಯ ದೊರಕಿಲ್ಲ. ಎರಡು ವರ್ಷದಿಂದ ಪುನರ್ವಸತಿಗಾಗಿ ನಿರಾಶ್ರಿತರು ಹೋರಾಟ ನಡೆಸುತ್ತಿದ್ದರೂ ಆಡಳಿತವು ಈ ಬಗ್ಗೆ ಗಮನ ಹರಿಸಿಲ್ಲ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಹೇಳಿದ್ದಾರೆ.

"ಈಗ ನಾಡ ಕಛೇರಿ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ. ಇದಕ್ಕೂ ಸ್ಪಂದಿಸದಿದ್ದರೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಉಪವಾಸ ಸತ್ಯಾಗ್ರ ಮಾಡಲು ತೀರ್ಮಾನಿಸಿದ್ದೇವೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net