ರಾಜಕಾರಣಿಗಳ ಸಂಬಂಧಿಕರಿಗೆ, 60 ವರ್ಷ ಮೇಲ್ಪಟ್ಟವರಿಗೆ ಬಿಜೆಪಿ ಟಿಕೆಟ್​ ಇಲ್ಲ!

bjp
Published on

ಗಾಂಧಿನಗರ: ಗುಜರಾತ್​ನ ಸ್ಥಳೀಯ ಸಂಸ್ಥೆ ಮತ್ತು ನಾಗರಿಕ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, 60 ವರ್ಷ ಮೇಲ್ಪಟ್ಟವರಿಗೆ, ಈಗಾಗಲೇ ಮೂರು ಬಾರಿ ಚುನಾಯಿತರಾದವರಿಗೆ ಮತ್ತು ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ವತಿಯಿಂದ ಟಿಕೆಟ್​ ಕೊಡದಿರಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.

60 ವರ್ಷ ಮೇಲ್ಪಟ್ಟವರು, ಮೂರು ಬಾರಿ ಚಾನಾಯಿತರಾಗಿ ಅಧಿಕಾರವನ್ನು ನಿರ್ವಹಿಸಿದವರು ಮತ್ತು ರಾಜಕಾರಣಿಗಳ ಸಂಬಂಧಿಗಳಿಗೆ ಟಿಕೆಟ್​ ಕೊಡಲಾಗುವುದಿಲ್ಲ. ಯುವ ಜನತೆಗೆ ಹೆಚ್ಚಿನ ಅವಕಾಶ ಕೊಡಲಾಗುವುದು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿಆರ್​ ಪಾಟೀಲ್​ ತಿಳಿಸಿದ್ದಾರೆ. ಪುರಸಭೆ ಚುನಾವಣೆಗಳಿಗೆ 8000 ಅಭ್ಯರ್ಥಿಗಳ ಆಯ್ಕೆಯಾಗಬೇಕಿದೆ. ಅದಕ್ಕೆಂದು ಪಕ್ಷವು ಮೂರು ದಿನಗಳ ಸಭೆಯನ್ನು ಹಮ್ಮಿಕೊಂಡಿದೆ.

ರಾಜ್ಯದ ಮಹಾನಗರ ಪಾಲಿಕೆಗಳಿಗೆ ಫೆಬ್ರವರಿ 21 ರಂದು ಮತದಾನ ನಡೆಯಲಿದ್ದು, ಪುರಸಭೆಗಳು ಮತ್ತು ಪಂಚಾಯಿತಿಗಳಿಗೆ ಫೆಬ್ರವರಿ 28 ರಂದು ಮತದಾನ ನಡೆಯಲಿದೆ. ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯ ಫಲಿತಾಂಶಗಳು ಫೆಬ್ರವರಿ 23 ರಂದು ಇರಲಿದ್ದು, ಪುರಸಭೆಗಳು ಮತ್ತು ಪಂಚಾಯಿತಿಗಳಿಗೆ ಮಾರ್ಚ್ 2 ರಂದು ಫಲಿತಾಂಶ ಹೊರಬರಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net