Vice Presidential election ; ನಮ್ಮಲ್ಲಿ ಯಾವ ಗೊಂದಲವು ಇಲ್ಲ ಎಂದ ಆಂಧ್ರ ಸಚಿವ ನಾರಾ ಲೋಕೇಶ್!

Nara Lokesh
Published on

Vice Presidential election: ಉಪರಾಷ್ಟ್ರಪತಿ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಹೆಸರನ್ನು ವಿಪಕ್ಷಗಳು ತನ್ನ ಅಭ್ಯರ್ಥಿ ಎಂದು ಘೋಷಿಸಿ ಕೆಲವೇ ಸಮಯದ ನಂತರ ಈ ನಿರ್ಣಯಕ್ಕೆ ಪ್ರತಿಕ್ರಿಯಿಸಿರುವ ಎನ್​ಡಿಎ ಮಿತ್ರಪಕ್ಷ ಟಿಡಿಪಿ, ತನ್ನ ಆಯ್ಕೆಯ ಬಗ್ಗೆ "ಯಾವುದೇ ಅಸ್ಪಷ್ಟತೆ" ಇಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ:ಪಿಎಂಎ ಆವಾಸ್ ಯೋಜನೆಯಲ್ಲಿ ಮೈಸೂರು ಜಿಲ್ಲೆ ಪ್ರಥಮ ಈ ವಿಷಯವಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಏಕತೆಯ ಸಂದೇಶ ಸಾರಿರುವ ಚಂದ್ರಬಾಬು ನಾಯ್ಡು ಪುತ್ರ, ಸಚಿವ ನಾರಾ ಲೋಕೇಶ್, ಅಸ್ಪಷ್ಟತೆ ಇಲ್ಲ - ಕೇವಲ ಉಷ್ಣತೆ, ಗೌರವ ಮತ್ತು ಸಂಕಲ್ಪ. ಎನ್‌ಡಿಎ ಒಗ್ಗಟ್ಟಿನಿಂದ ನಿಂತಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮೈಸೂರು ದಸರಾಕ್ಕೆ ಮೂರು ಹೊಸ ಆನೆಗಳು ಪ್ರತಿಪಕ್ಷಗಳು ಆಂಧ್ರಪ್ರದೇಶ ಮೂಲದ ನ್ಯಾಯಾಧೀಶರ ಆಯ್ಕೆಯು ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷವನ್ನು ಗೊಂದಲದ ಸ್ಥಾನದಲ್ಲಿ ಇರಿಸುತ್ತದೆ ಎಂದು ವಿಪಕ್ಷಗಳು ಆಶಿಸಿವೆ. ಈ ರೀತಿಯ ಪ್ರಾದೇಶಿಕ ವಿಷಯ ಬಂದಾಗ ದಕ್ಷಿಣ ರಾಜ್ಯಗಳಲ್ಲಿ ಭಾಷೆ ಭಾವನಾತ್ಮಕ ವಿಷಯವಾಗಿರುವುದರಿಂದ ಈ ತಂತ್ರವು ಇಂಡಿಯಾ ಕೂಟಕ್ಕೆ ಲಾಭ ತಂದುಕೊಡಬಹುದೇ ಎನ್ನುವುದನ್ನು ನೋಡಲು ಇನ್ನೂ ಕೆಲ ದಿನ ಕಾಯಲೇಬೇಕು.

ತಿರುಮಂತ್ರವಾಯ್ತಾ ಅವಸರದ ನಿರ್ಧಾರ..?

ಬಿಜೆಪಿ ತನ್ನ ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ತಮಿಳುನಾಡು ಮೂಲದ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡುವ ಮೂಲಕ ಇಂಡಿಯಾ ಕೂಟದ ಪಾಲುದಾರ ಪಕ್ಷವಾದ ಡಿಎಂಕೆಗೆ ಸಂದಿಗ್ದತೆ ತಂದೊಡ್ಡಿತ್ತು. ಸದ್ಯ ಇದಕ್ಕೆ ತಿರುಗೇಟು ನೀಡಿರುವ ಪ್ರತಿಪಕ್ಷಗಳ ಒಕ್ಕೂಟ ಪರಿಸ್ಥಿತಿಯನ್ನು ಬದಲಾಯಿಸಿ ಎನ್​ಡಿಎ ಮೈತ್ರಿಕೂಟಕ್ಕೆ ಗೊಂದಲಕ್ಕೀಡಾಗುವಂತೆ ಮಾಡಿದೆ.

ಯಾರಿಗೆ ಹೆಚ್ಚು ಚಾನ್ಸ್​​..?

ಸಂಖ್ಯೆಗಳ ಪ್ರಕಾರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವಂತೆ ತೋರುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಒಳಗೊಂಡು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಖಾಲಿ ಹುದ್ದೆಗಳನ್ನು ಹೊರತುಪಡಿಸಿ, ಪ್ರಸ್ತುತ ಒಟ್ಟು ಸಂಖ್ಯಾಬಲ 782 ಇದ್ದು, ಗೆಲ್ಲುವ ಪಕ್ಷವು ಕನಿಷ್ಠ 392 ಮತಗಳನ್ನು ಪಡೆಯಬೇಕು.

ಮೇಲ್ನೋಟಕ್ಕೆ ಬಿಜೆಪಿಗೆ ಅನುಕೂಲವಿದ್ದರೂ, ವಿರೋಧ ಪಕ್ಷಗಳು ಬಿ. ಸುದರ್ಶನ್ ರೆಡ್ಡಿ ಅವರನ್ನು ಆಯ್ಕೆ ಮಾಡಿರುವುದು ನಿಸ್ಸಂದೇಹವಾಗಿ ಉಪರಾಷ್ಟ್ರಪತಿ ಚುನಾವಣೆಯ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net