ಕಾಂಗ್ರೆಸ್​​ ಜತೆ ಮೈತ್ರಿ ಇಲ್ಲ; ವಿಧಾನಸಭಾ ಚುನಾವಣೆಯಲ್ಲಿ AAP ಏಕಾಂಗಿ ಸ್ಪರ್ಧೆ: ಅರವಿಂದ ಕೇಜ್ರಿವಾಲ್​

AAP
Published on

ದೆಹಲಿ:ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಾರ್ಟಿ(AAP) ಏಕಾಂಗಿ ಆಗಿ ಸ್ಪರ್ಧೆ ಮಾಡಲಿದೆ. ಯಾವುದೇ ಪಕ್ಷದ ಅಥವಾ ಕಾಂಗ್ರೆಸ್​ ಜತೆ ಮೈತ್ರಿ ಇಲ್ಲ ಎಂದು ಮಾಜಿ ಸಿಎಂ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ ಎಂದು ವರದಿಯಾಗಿದೆ.

'ಆಮ್ ಆದ್ಮಿ ಪಾರ್ಟಿ ತನ್ನ ಸ್ವಂತ ಬಲದ ಮೇಲೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್​​ ಜತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ತಮ್ಮ ಪಕ್ಷದ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಎಎಪಿ ಜತೆಗೂಡಿ ಸ್ಪರ್ಧಿಸುವ ಕುರಿತು ಇಂಡಿಯಾ ಕೂಟದ ನಾಯಕರು ಇಂಗಿತ ವ್ಯಕ್ತಪಡಿಸಿ, ಈ ಕುರಿತು ಎಕ್ಸ್​ ಪೋಸ್ಟ್​​ ಮಾಡಿದ್ದಾರೆ. ಈ ಬೆನ್ನಲ್ಲೆ ಕೇಜ್ರಿವಾಲರ ಈ ಹೇಳಿಕೆ ಹೊರ ಬಿದ್ದಿದೆ'.

ದೆಹಲಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಸಾಧ್ಯತೆಯನ್ನು ಕೇಜ್ರಿವಾಲ್​ ಸೇರಿ ಪಕ್ಷದ ನಾಯಕರು ತಳ್ಳಿ ಹಾಕುತ್ತಿರುವುದು ಇದೇ ಮೊದಲಲ್ಲ. ಇದೇ ತಿಂಗಳ ಆರಂಭದಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾಂಗ್ರೆಸ್​ ಜತೆ ಮೈತ್ರಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಲ್ಲದೆ, ಈ ಬಾರಿ ಸ್ವಂತ ಬಲದ ಮೇಲೆ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಎಲೆಕ್ಷನ್​ನಲ್ಲಿ ಕಾಂಗ್ರೆಸ್​ ಮತ್ತು ಎಎಪಿ ಪಕ್ಷಗಳು ಮೈತ್ರಿಯ ಮಾತುಕತೆಯಲ್ಲಿ ಇದೆ ಎಂಬ ವರದಿಗಳ ಹಿನ್ನೆಲೆ ಆಮ್​ ಆದ್ಮಿ ಪಾರ್ಟಿ ನಾಯಕರು ಮೈತ್ರಿಯನ್ನು ತಳ್ಳಿ ಹಾಕಿದ್ದಾರೆ.

ಚುನಾವಣೆ ಸ್ಪರ್ಧೆಗೆ ಎಎಪಿ ಈಗಾಗಲೇ ಎರಡು ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net