

ನವದೆಹಲಿ: ಇಂಡಿಯಾ(INDIA) ಮೈತ್ರಿಕೂಟದ ನೇತೃತ್ವವನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ವಹಿಸಿ ಎಂದು INDIAದ ಕೆಲ ನಾಯಕರು ಕಾಂಗ್ರೆಸ್ಗೆ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆ ವಿರೋಧ ಪಕ್ಷದ ಪಾಳಯದಲ್ಲಿನ ಬಿರುಕು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ ಎಂದು ಕೆಲ ನಾಯಕರ ಅಕ್ಷೇಪ ಹಿನ್ನೆಲೆ ಮತ್ತು ಇತ್ತೀಚಿಗೆ ನಡೆದ ಮಹಾರಾಷ್ಟ್ರ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಪಕ್ಷ ಹಿನಾಯವಾಗಿ ಸೋತ ಬಳಿಕ ಪರ್ಯಾಯ ನಾಯಕತ್ವಕ್ಕೆ ಬೇಡಿಕೆ ಹೆಚ್ಚಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಇಂಡಿಯಾ ಕೂಟದ ನೇತೃತ್ವದ ವಹಿಸಿಕೊಳ್ಳುವ ಜವಬ್ದಾರಿ ಬಗ್ಗೆ ಮಮತಾ ಕಳೆದ ವಾರದಲ್ಲಿ ಮಾತನಾಡಿದ್ದರು. ಇಷ್ಟರಲ್ಲೇ ವಿಪಕ್ಷದ ಕೆಲ ನಾಯಕರು ಮಮತಾ ಬೆಂಬಲಕ್ಕೆ ನಿಂತಿದ್ದಾರೆ. ವೈಸಿಪಿಯ ಜಗನ್ ಮೋಹನ್ ರೆಡ್ಡಿ, ಸಮಾಜವಾದಿ ಪಕ್ಷ, ಎನ್ಸಿಪಿ, ಶೀವಸೇನ (ಉದ್ದವ್) ಸೇರಿದಂತೆ ಕಾಂಗ್ರೆಸ್ಸೇತರ ನಾಯಕರು ಅವರ ಬೆಂಬಲದ ಬಗ್ಗೆ ನೇರ ಮತ್ತು ಪರೋಕ್ಷವಾಗಿ ಮಾತನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, 'ನಾವು ಮಮತಾ ಅವರನ್ನು ಬೆಂಬಲಿಸುತ್ತೇವೆ. ಅವರಿಗೆ ಮೈತ್ರಿಕೂಟದ ಮುಖ್ಯಸ್ಥರಾಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ಗೆ ಮತ್ತು ನಾಯಕರಿಗೆ ಭಾರೀ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ವರದಿಯಾಗಿದೆ.
ಮಮತಾ ಬ್ಯಾನರ್ಜಿ ಅವರು ಮೈತ್ರಿಕೂಟದ ನೇತೃತ್ವ ವಹಿಸಲು ಅಗತ್ಯವಾದ ರಾಜಕೀಯ ಮತ್ತು ಚುನಾವಣಾ ಅನುಭವವನ್ನು ಹೊಂದಿರುವುದರಿಂದ ಭಾರತ ಮೈತ್ರಿಕೂಟವನ್ನು ಮುನ್ನಡೆಸಲು ಸೂಕ್ತ ಅಭ್ಯರ್ಥಿಯಾಗಿದ್ದಾರೆ. ದೀದಿ ಅವರು 42 ಲೋಕಸಭಾ ಸ್ಥಾನಗಳನ್ನು ಹೊಂದಿರುವ ದೊಡ್ಡ ರಾಜ್ಯದ ಸಿಎಂ ಆಗಿದ್ದಾರೆ ಮತ್ತು ತಮ್ಮನ್ನು ತಾವು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ ಎಂದು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸಂಸದ ವಿಜಯಸಾಯಿ ರೆಡ್ಡಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಆಂಧ್ರಸದ ಮಾಜಿ ಸಿಎಂ ಜಗನ್ ರೆಡ್ಡಿ ಅವರು ಪ್ರತಿಪಕ್ಷಗಳ ಮೈತ್ರಿಗೆ ಒಲವು ತೋರುತ್ತಿದ್ದಾರೆ.
ಹೆಚ್ಚುತ್ತಿರುವ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಉತ್ತೇಜಿತಗೊಂಡ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಕಾಂಗ್ರೆಸ್ ತನ್ನ ಅಹಂಕಾರವನ್ನು ಬದಿಗಿಟ್ಟು ಮಮತಾ ಬ್ಯಾನರ್ಜಿ ಅವರನ್ನು ಭಾರತ ಬ್ಲಾಕ್ ಮುಖ್ಯಸ್ಥರನ್ನಾಗಿ ಮಾಡುವಂತೆ ಭಾರೀ ಒತ್ತಡ ಹೇರಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).