

ಕೋಲಾರ: ಸ್ವಚ್ಛ ಭಾರತ್ ಮೀಷನ್ ಯೋಜನೆಯಲ್ಲಿ ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ಅಕ್ರಮ ಎಸಗಿರುವುದು ಸಾಭೀತಾದರೂ ಸಹ ಇದುವರೆಗೂ ಕ್ರಮ ಜರುಗಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೋಲಾರ ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ 1.0 ಅಡಿ ನತ್ಯಾಜ್ಯ ನಿರ್ವಹಣೆಗಾಗಿ ಬಿಡುಗಡೆ ಮಾಡಿದ 2.40 ಕೋಟಿ ರೂ.ಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವಿಜಯವಾಣಿ ಬೆಳಕು ಚೆಲ್ಲಿತ್ತು. ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿಯೂ ವರದಿ ಸದ್ದು ಮಾಡಿತ್ತು.
ನತ್ಯಾಜ್ಯ ನಿರ್ವಹಣೆಗಾಗಿ ನಗರಸಭೆಯಿಂದ ಖರೀದಿಸಿರುವ ಯಂತ್ರಗಳು ಹಾಗೂ ಯಂತ್ರೋಪಕರಣಗಳು ಕಳಪೆಯಿಂದ ಕೂಡಿದ್ದರೂ, 20&30 ಪಟ್ಟು ಹೆಚ್ಚಿನ ದರ ಕೊಟ್ಟು ಖರೀದಿ ಮಾಡಿರುವುದರ ಬಗ್ಗೆ ಬಯಲು ಮಾಡಿತ್ತು. ಕೋಲಾರ ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಿಲೀಪ್ ಗುತ್ತಿಗೆದಾರರಿಗೆ ನೇರವಾಗಿ ಕಾರ್ಯಾದೇಶ ನೀಡಿದ್ದರು. ಈ ವಿಚಾರದಲ್ಲಿ ನಿಯಮಗಳನ್ನು ಉಲ್ಲಂನೆ ಮಾಡಿರುವುದು ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದಿಲೀಪ್ನನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಶಿಾರಸು ಮಾಡಿದ್ದರು.
ದಿಲೀಪ್ ಅವರನ್ನು ಸರ್ಕಾರ ಈ ಹಿಂದೆಯೇ ವರ್ಗಾವಣೆ ಮಾಡಿ ಆದೇಶಿಸಿತ್ತಾದರೂ, ಕೋಲಾರ ನಗರಸಭೆಯಿಂದ ಬಿಡುಗಡೆಗೊಳ್ಳದೆ ಪ್ರಭಾವ ಬಳಿಸಿ ಇಲ್ಲೇ ಮುಂದುವರೆದಿದ್ದಾರೆ. ಜತೆಗೆ ಈ ಪ್ರಕರಣಗಳಿಗೆಲ್ಲ ಕಾರಣವಾಗಿದ್ದು, ಕ್ರಮಕೈಗೊಳ್ಳಲು ವರದಿ ಸಲ್ಲಿಸಿ ಒಂದುವರೆ ತಿಂಗಳು ಕಳೆದರೂ ಯಾವುದೇ ರೀತಿಯ ಕ್ರಮವಾಗದೆ ಇರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
* ಗುಂಡಿ ತೆಗೆಯಲು ಲಕ್ಷ ಲಕ್ಷ ಬಿಲ್ ಡ್ರಾ
ದಿಲೀಪ್ ಪ್ರಕರಣವು ಮಾಸುವ ಮೊದಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಬದಲಿಗೆ ಜೆಸಿಬಿಗಳಿಂದ ಗುಂಡಿ ತೆಗೆದು ಕಸ ಮುಚ್ಚಿದ್ದಾರೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ಗುಂಡಿಗಳನ್ನು ತೆಗೆದು ಕಸ ತುಂಬಿ ಮತ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿಯೂ ಅವ್ಯವಹಾರ ನಡೆಸಿರುವ ಬಗ್ಗೆ ಕೆಲ ಸದಸ್ಯರಿಂದಲೇ ಆರೋಪ ಕೇಳಿ ಬಂದಿವೆ. ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ನವಾಜ್ ಅಕ್ರಮ ಎಸಗಿದ್ದಾರೆ, ಗುತ್ತಿಗೆದಾರರ ಸಹಿಯನ್ನೂ ಅಧಿಕಾರಿಯೇ ಹಾಕಿ ಬಿಲ್ ಡ್ರಾ ಮಾಡಿದ್ದಾರೆ ಎಂದು ಸಾಮಾನ್ಯ ಸಭೆಯಲ್ಲೇ ಸದಸ್ಯರು ಆರೋಪಿಸಿದ್ದರು. ಖಾಸಗಿ ಜಾಗದಲ್ಲಿ ನಡೆಸಿರುವಂತಹ ಕಾಮಗಾರಿಗಳಿಗೆ ಸುಮಾರು 1.90 ಲಕ್ಷ ರೂ. ಖರ್ಚು ಮಾಡಿರುವುದು, ನಗರಸಭೆಯಲ್ಲಿನ ವಾಹನಗಳಿಗೆ ಟೈರ್ಗಳ ಖರೀದಿಯಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬಂದಿವೆ.
ಕೋಟ್...
ಖಾಸಗಿ ಸ್ಥಳದಲ್ಲಿ ಕಾಮಗಾರಿ ನಡೆಸಿರುವುದಕ್ಕೆ ಆರೋಗ್ಯ ನಿರೀಕ್ಷಕ ನವಾಜ್ ಬಿಲ್ ಮಾಡಿಕೊಂಡಿದ್ದಾರೆ. ನಗರಸಭೆ ಅನುದಾನವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿದ್ದಾರೆ. ಈಗಾಗಲೇ ಬಯಲಿಗೆ ಬಂದಿರುವ ಪ್ರಕರಣಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲು ಸಾಮಾನ್ಯ ಸಭೆಗಳಲ್ಲಿ ತೀರ್ಮಾನಿಸಲಾಗಿದ್ದು, ನಗರಸಭೆಯಿಂದ ನೀಡದಿದ್ದರೆ ಖುದ್ದು ನಾನೇ ದೂರು ಸಲ್ಲಿಸುತ್ತೇನೆ.
- ಪ್ರವಿಣ್ಗೌಡ, ನಗರಸಭೆ ಸದಸ್ಯರು
6ಕೋಲಾರ7
ಕೋಲಾರ ನಗರಸಭೆ.
6ಕೋಲಾರ7ಎ
ನವಾಜ್