ಕಾನೂನೇತರ ಬಿಎ ಆನರ್ಸ್ ಕೋರ್ಸ್ ಆರಂಭಿಸಿದ ಲಾ ಸ್ಕೂಲ್

National Law School of India University
Published on

ಬೆಂಗಳೂರು ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) ಬೆಂಗಳೂರು ವತಿಯಿಂದ 2025-26ನೇ ಸಾಲಿನಿಂದ ಬಿಎ ಆನರ್ಸ್ ಕೋರ್ಸ್ ಅನ್ನು ಆರಂಭಿಸುತ್ತಿದೆ. ಈ ಮೂಲಕ ಕಾನೂನೇತರ ವೈವಿಧ್ಯಮಯ ಕೋರ್ಸ್‌ಗಳಾದ ಇತಿಹಾಸ, ಅರ್ಥಶಾಸ, ರಾಜಕೀಯ, ಸಮಾಜಶಾಸ ಮತ್ತು ಮಾನವಶಾಸ ಕೋರ್ಸ್‌ಗಳಿಗೆ ಆದ್ಯತೆ ನೀಡಿದೆ.

ಐದು ವರ್ಷಗಳ ಬಿಎ ಆನರ್ಸ್ ಎಲೆಎಲ್‌ಬಿ ಕೋರ್ಸ್ ಆರಂಭಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಸಂಸ್ಥೆಯಲ್ಲಿನ ಅಧ್ಯಾಪಕರ ಸಾಮರ್ಥ್ಯ ಮತ್ತು ವೈವಿಧ್ಯತೆ ಹೆಚ್ಚಾದಂತೆ ಈ ಕ್ಷೇತ್ರಗಳು ಮತ್ತು ವಿಭಾಗಗಳನ್ನು ವಿಸ್ತರಿಸುತ್ತೇವೆ. ಕಾಲಾನಂತರದಲ್ಲಿ, ತತ್ವಶಾಸ್ತ್ರ, ಸಾಹಿತ್ಯ, ಪರಿಸರ ಅಧ್ಯಯನಗಳು, ಡೇಟಾ ಅನಾಲಿಟಿಕ್ಸ್ ಅನ್ನು ಮೇಜರ್ ಮತ್ತು ಮೈನರ್ ವಿಷಯಗಳಾಗಿ ಪರಿಚಯಿಸಲಾಗುತ್ತದೆ ಎಂದು ಲಾ ಸ್ಕೂಲ್ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಪಠ್ಯಕ್ರಮದ ಭಾಗವಾಗಿ ಭಾರತೀಯ ಭಾಷೆಗಳನ್ನು ಕಲಿಯುವ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಹಾಗೆಯೇ ಪ್ರಾಕ್ಟೀಸ್ ಕೋರ್ಸ್‌ಗಳ ಜತೆ ಕೃತಕ ಬುದ್ಧಿಮತ್ತೆ (ಎಐ), ಮಷಿನ್ ಲರ್ನಿಂಗ್, ಸಿನಿಮಾ, ಬಿಜಿನೆಸ್, ಡಿಜಿಟಲ್ ಪತ್ರಿಕೋದ್ಯಮ, ಕ್ರಿಯೇಟಿವ್ ರೈಟಿಂಗ್, ಉದ್ಯಮಶೀಲತೆ, ಪಾಲಿಸಿ ಅಡ್ವೈಸರಿ ಆೃಂಡ್ ಅನಾಲಿಸಿಸ್ ಸೇರಿ ಇತರೆ ಕೋರ್ಸ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.

60 ಸೀಟುಗಳು ಲಭ್ಯ:

60 ಸೀಟುಗಳನ್ನು ಹೊಂದಿದ್ದು, ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೀಸಲಾತಿ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಿದ್ದು, ಇದಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಬಿಎ ಆನರ್ಸ್ ಪ್ರವೇಶ ಪರೀಕ್ಷೆ ನಡೆಸಲಿದೆ. 75 ಅಂಕಗಳಿಗೆ 2 ಪತ್ರಿಕೆ ಸೇರಿ ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

ಜನವರಿಯಲ್ಲಿ ಅರ್ಜಿ ಸಲ್ಲಿಕೆ ಆರಂಭ:

ನೋಂದಣಿ ಾರ್ಮ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 2025ರ ಜನವರಿ ಮೊದಲ ವಾರದಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಮಾರ್ಚ್ 23 ಕೊನೆಯ ದಿನವಾಗಿದೆ. ಏಪ್ರಿಲ್ 27ರಂದು ಪರೀಕ್ಷೆ ನಡೆಯಲಿದ್ದು, ಮೇ ಅಂತ್ಯಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಿದೆ. ಜುಲೈ 1ರಿಂದ ತರಗತಿಗಳು ಆರಂಭವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net