ಕಲ್ಲಿದ್ದಲು ಘಟಕದಿಂದ ಟ್ರೇನಿಗಳಿಗೆ ಕರೆ; ಇಂಜಿನಿಯರಿಂಗ್ ವಿದ್ಯಾರ್ಹತೆಯುಳ್ಳವರಿಗೆ ಅವಕಾಶ

NLC new
Published on

ಬೆಂಗಳೂರು: ಕೇಂದ್ರ ಕಲ್ಲಿದ್ದಲು ಸಚಿವಾಲಯದ ಒಡೆತನಕ್ಕೆ ಒಳಪಡುವ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್ ನವರತ್ನ ಕೈಗಾರಿಕೋದ್ಯವಾಗಿದ್ದು, 1956ರಲ್ಲಿ ಸ್ಥಾಪಿತವಾಯಿತು. ವಾರ್ಷಿಕವಾಗಿ 30 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮಾಡುವ ಎನ್‌ಎಲ್‌ಸಿ, ತಮಿಳುನಾಡಿನ ನೈವೇಲಿ ಹಾಗೂ ರಾಜಸ್ಥಾನದ ಬಿಕಾನೇರ್‌ನಲ್ಲಿ ಗಣಿ ಪ್ರದೇಶವನ್ನು ಹೊಂದಿದೆ. ಪ್ರಸ್ತುತ ಕೈಗಾರಿಕಾ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಇಂಜಿನಿಯರಿಂಗ್ ವಿದ್ಯಾರ್ಹತೆಯುಳ್ಳವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

ಒಟ್ಟು ಹುದ್ದೆ: 239

ಹುದ್ದೆ ವಿವರ
ಇಂಡಸ್ಟ್ರೀಯಲ್ ಟ್ರೇನಿ(ಟೆಕ್ನಿಕಲ್) 100
ಇಂಡಸ್ಟ್ರೀಯಲ್ ಟ್ರೇನಿ(ಮೈನ್/ಸಪೋರ್ಟ್ ಸರ್ವಿಸ್) 139

ಏನೆಲ್ಲಾ ಓದಿರಬೇಕು?
ಟೆಕ್ನಿಕಲ್ ವಿಭಾಗದಲ್ಲಿನ ಇಂಡಸ್ಟ್ರೀಯಲ್ ಟ್ರೇನಿ ಹುದ್ದೆಗೆ ಅರ್ಜಿ ಸಲ್ಲಿಸುವವರು, ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಇಂಜಿನಿಯರಿಂಗ್ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ ಪಾಸ್ ಆಗಿರಬೇಕಿದೆ. ಹಾಗೆಯೇ, ಮೈನ್ಸ್‌ನಲ್ಲಿ ಸಪೋರ್ಟ್ ಸರ್ವಿಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಹಾಗೂ ಇಂಜಿನಿಯರಿಂಗ್‌ನ ಯಾವುದಾದರು ವಿಷಯದಲ್ಲಿ ಐಟಿಐ ಪೂರ್ಣಗೊಳಿಸಿರಬೇಕಿದೆ.

ಎಷ್ಟು ವರ್ಷದೊಳಗಿನವರಿಗೆ ಅವಕಾಶ?
ಸಾಮಾನ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 37, ನಾನ್-ಕ್ರೀಮಿ ಲೇಯರ್‌ನ ಒಬಿಸಿ ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಎಸ್ಸಿ/ಎಸ್ಟಿ ವರ್ಗದ 42 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಎಲ್ಲೆಲ್ಲಿಗೆ ನಿಯೋಜನೆ?
ದೇಶದ ವಿವಿಧ ಸ್ಥಳಗಳಲ್ಲಿರುವ ಎನ್‌ಎಲ್‌ಸಿಯ ಘಟಕಗಳಿಗೆ ಅಭ್ಯರ್ಥಿಗಳು ನಿಯೋಜನೆಗೊಳ್ಳಲಿದ್ದಾರೆ.

ತರಬೇತಿ ಅವಧಿ
3 ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ತರಬೇತಿಗೆ ಒಳಪಡಿಸಲಾಗುವುದು.

ಸ್ಟೈಪೆಂಡ್
ಟೆಕ್ನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಟ್ರೇನಿಗಳಿಗೆ ವರ್ಷಕ್ಕೆ ಅನುಗುಣವಾಗಿ 18,000ರೂ.-22,000ರೂ. ಸ್ಟೈಪೆಂಡ್ ನಿಗದಿಯಾಗಿದ್ದು, ಮೈನಿಂಗ್‌ನಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳು 14,000ರೂ.-18,000ರೂ. ಸ್ಟೈಪೆಂಡ್ ಪಡೆಯಲಿದ್ದಾರೆ.

ಹೇಗೆ ಆಯ್ಕೆ ಮಾಡಿಕೊಳ್ಳಲಾಗುವುದು?
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಅಭ್ಯರ್ಥಿಗಳು ಒಂದೇ ಅಂಕವನ್ನು ಗಳಿಸಿದ್ದಲ್ಲಿ ವಯಸ್ಸು ಹಾಗೂ ಇಂಗ್ಲಿಷ್‌ನ ಅಲ್ಫಾಬೆಟಿಕ್ ಕ್ರಮವಾಗಿ ಆಯ್ಕೆಗೊಳ್ಳಲಿದ್ದಾರೆ.

ಅರ್ಜಿ ಹೀಗೆ ಸಲ್ಲಿಸಿ..
ಎನ್‌ಎಲ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ ನಮೂದಿಸಬೇಕಿದೆ. ಅಗತ್ಯ ದಾಖಲಾತಿಗಳ ಸ್ಕ್ಯಾನ್ಡ್ ಕಾಪಿಯನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡಬೇಕಿದೆ.

ಅರ್ಜಿ ಇಲ್ಲಿ ಸಲ್ಲಿಸಿ
bit.ly/3VoTZQP

ಅರ್ಜಿ ಈ ದಿನದೊಳಗೆ ಸಲ್ಲಿಕೆಯಾಗಬೇಕು....
19.04.2024

ಅಧಿಸೂಚನೆ
bit.ly/3TGTgt3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net