More

    ರೈಲ್ವೆ ವಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ; ಎಸ್‌ಐ, ಕಾನ್ಸ್‌ಟೇಬಲ್, ಟೆಕ್ನೀಷಿಯನ್‌ಗಳಿಗೆ ಕರೆ

    ಬೆಂಗಳೂರು: ರೈಲ್ವೆ ರೆಕ್ರ್ಯೂಟ್‌ಮೆಂಟ್ ಬೋರ್ಡ್ (ಆರ್‌ಆರ್‌ಬಿ) ಸರ್ಕಾರಿ ನೇಮಕಾತಿ ಸಂಸ್ಥೆಯಾಗಿದ್ದು, ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಅಡಿಯಲ್ಲಿ ಬರುವ ನಾನ್-ಗೆಜೆಟೆಡ್ ನಾಗರಿಕ ಸೇವೆ ಹಾಗೂ ಇಂಜಿನಿಯರಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯಪ್ರವೃತ್ತವಾಗಿರುವ ಆರ್‌ಆರ್‌ಬಿಯು 1998ರಲ್ಲಿ ಸ್ಥಾಪಿತವಾಗಿದ್ದು, ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಪ್ರಸ್ತುತ ಆರ್‌ಪಿಎಫ್, ಆರ್‌ಪಿಎಸ್‌ಎಫ್ ಹಾಗೂ ಟೆಕ್ನೀಷಿಯನ್ ಗ್ರೇಡ್‌ಗೆ ನೇಮಕಾತಿ ನಡೆಸಲು ಮುಂದಾಗಿದೆ.

    ಒಟ್ಟು ಹುದ್ದೆ: 13804

    ಹುದ್ದೆ ವಿವರ
    ಸಬ್‌ಇನ್ಸ್‌ಪೆಕ್ಟರ್ (RPF/RPSF) 452
    ಕಾನ್‌ಸ್ಟೇಬಲ್ (RPF/RPSF) 4208
    ಟೆಕ್ನೀಷಿಯನ್ ಗ್ರೇಡ್-1 ಸಿಗ್ನಲ್ 1092
    ಟೆಕ್ನೀಷಿಯನ್ ಗ್ರೇಡ್-3 8052

    ಶೈಕ್ಷಣಿಕ ಅರ್ಹತೆ
    ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಸ್‌ಎಸ್‌ಎಲ್‌ಸಿ/ಪಿಯುಸಿ/ಐಟಿಐ/ಡಿಪ್ಲೊಮಾ/ಬಿಎಸ್ಸಿ/ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕಿದೆ. ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ/ತತ್ಸಮಾನ ವಿದ್ಯಾರ್ಹತೆ ಹಾಗೂ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ವ್ಯಾಸಂಗ ಮಾಡಿರಬೇಕಿದೆ.

    ವಯೋಮಿತಿ
    ಎಸ್‌ಐ-20-28
    ಕಾನ್‌ಸ್ಟೇಬಲ್-18-28
    ಟೆಕ್ನೀಷಿಯನ್-1-18-36
    ಟೆಕ್ನೀಷಿಯನ್-3-18-33

    ವಯೋಸಡಿಲಿಕೆ
    ಟೆಕ್ನೀಷಿಯನ್ ಗ್ರೇಡ್‌ನಡಿಯಲ್ಲಿ ಒಬಿಸಿ-ಎನ್‌ಎಲ್‌ಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿಗೆ 5 ವರ್ಷ ವಯೋಸಡಿಲಿಕೆ ಇರಲಿದೆ. ಇನ್ನು ಎಸ್‌ಐ ಹಾಗೂ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಒಬಿಸಿ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ನಿಗದಿಗೊಂಡಿದೆ.

    ವೇತನ ಶ್ರೇಣಿ
    ಎಸ್‌ಐ-35,400ರೂ., ಕಾನ್‌ಸ್ಟೇಬಲ್-21,700ರೂ.,ಟೆಕ್ನೀಷಿಯನ್ 1-29,200ರೂ., ಟೆಕ್ನೀಷಿಯನ್ 3-19,900ರೂ.ವೇತನವಿರಲಿದೆ.

    ಅರ್ಜಿ ಶುಲ್ಕ
    ಎಸ್ಸಿ/ಎಸ್ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು 250ರೂ. ಹಾಗೂ ಇತರ ವರ್ಗದವರು 500ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕಿದೆ.

    ಅರ್ಜಿ ಶುಲ್ಕ ಮರುಪಾವತಿ
    ಪ್ರಕ್ರಿಯೆ ಶುಲ್ಕ ಹೊರತು ಪಡೆಸಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದು ಎಂದು ಆರ್‌ಆರ್‌ಬಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

    ಆಯ್ಕೆ ಪ್ರಕ್ರಿಯೆ
    ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ, ಫಿಸಿಕಲ್ ಎಫೀಷಿಯನ್ಸಿ ಟೆಸ್ಟ್, ಫಿಸಿಕಲ್ ಮೆಷರ್‌ಮೆಂಟ್ ಟೆಸ್ಟ್ ಅನ್ನು ಅಭ್ಯರ್ಥಿಗಳು ಎದುರಿಸಬೇಕಿದೆ. ಟೆಕ್ನೀಷಿಯನ್ ಗ್ರೇಡ್‌ಗೆ ಆಯ್ಕೆಗೊಳ್ಳುವ ಅಭ್ಯರ್ಥಿಗಳನ್ನು ಸಿಬಿಟಿ ಹಾಗೂ ದಾಖಲೆ ಪರಿಶೀಲನೆ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.

    ಅರ್ಜಿ ಸಲ್ಲಿಕೆಯ ಹಂತ
    ಆನ್‌ಲೈನ್ ಅರ್ಜಿ ಸಲ್ಲಿಸುವ ವೇಳೆ ಅಗತ್ಯ ದಾಖಲೆಗಳ ಸ್ಕ್ಯಾನ್ಡ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಿದೆ. ಟೆಕ್ನೀಷಿಯನ್ ಗ್ರೇಡ್‌ಗೆ ಅರ್ಜಿ ಸಲ್ಲಿಸುವವರು bit.ly/490G72q ನಲ್ಲಿ ಸಲ್ಲಿಸಬೇಕಿದೆ. ಇನ್ನು ಎಸ್‌ಐ/ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಆರ್‌ಆರ್‌ಬಿಯ 13 ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

    ಅರ್ಜಿ ಸಲ್ಲಿಕೆ ದಿನಾಂಕ
    ಟೆಕ್ನೀಷಿಯನ್ ಗ್ರೇಡ್:08.04.2024
    ಎಸ್‌ಐ/ಕಾನ್‌ಸ್ಟೇಬಲ್: 15.04.2024-14.05.2024

    ಬಿಎಂಟಿಸಿಯಲ್ಲಿ ನಿರ್ವಾಹಕ ಹುದ್ದೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts