More

    ಬಿಎಂಟಿಸಿಯಲ್ಲಿ ನಿರ್ವಾಹಕ ಹುದ್ದೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

    ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ನಿರ್ವಾಹಕ (ದರ್ಜೆ 3) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಬಿಎಂಟಿಸಿ ಮಿಕ್ಕುಳಿದ ಹಾಗೂ ಸ್ಥಳೀಯ ವೃಂದಗಳಿಗೆ ಪ್ರತ್ಯೇಕವಾಗಿ ಮೀಸಲಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. 

    ಒಟ್ಟು ಹುದ್ದೆಗಳು-2500

    ಅರ್ಹತೆ
    ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಯಲ್ಲಿ ಪಿಯುಸಿ ಪೂರ್ಣಗೊಳಿಸಿರಬೇಕು ಅಥವಾ ಐಸಿಎಸ್‌ಇ, ಸಿಬಿಎಸ್‌ಇಯಲ್ಲಿ 10+2 ಉತ್ತೀರ್ಣರಾಗಿರಬೇಕು ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯಿಂದ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರಬೇಕು. ಪುರುಷರು 160 ಸೆಂ.ಮೀ ಮತ್ತು ಮಹಿಳೆಯರು 150 ಸೆಂ.ಮೀ ಎತ್ತರವಿರಬೇಕು.

    ವೇತನ
    ಒಂದು ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕವಾಗಿ 9,100 ರೂ. ಪಾವತಿಸಲಾಗುತ್ತದೆ. ಹುದ್ದೆಗೆ ಕಾಯಂಗೊಳ್ಳುವ ಅಭ್ಯರ್ಥಿಗಳಿಗೆ 18,660 ರೂ.ನಿಂದ 25,300 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

    ವಯೋಮಿತಿ
    ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗಕ್ಕೆ 35ವರ್ಷ, 2ಎ, 2ಬಿ, 3ಎ, 3ಬಿ ವರ್ಗಕ್ಕೆ 38 ವರ್ಷ, ಎಸ್‌ಸಿ-ಎಸ್‌ಟಿ ಹಾಗೂ ಪ್ರವರ್ಗ1ಕ್ಕೆ 40ವರ್ಷ ಮತ್ತು ಮಾಜಿ ಸೈನಿಕ/ಇಲಾಖಾ ಅಭ್ಯರ್ಥಿಗಳಿಗೆ 45ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಕೆಇಎ ಅಧಿಕೃತ http://kea.kar.nic.in ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಹಾಗಾಗಿ ಅಧಿಸೂಚನೆಯಲ್ಲಿರುವ ಎಲ್ಲ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿಕೊಳ್ಳಬೇಕು. ಅಗತ್ಯ ಮಾಹಿತಿಗಳ ಜತೆಗೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಕಪ್ಪು ಶಾಹಿ/ಮಾರ್ಕರ್ ಪೆನ್‌ನಲ್ಲಿ ಮಾಡಿರುವ ಸಹಿಯನ್ನು ಸ್ಕಾನ್ ಮಾಡಿ ಅಪ್‌ಲೋಡ್ ಮಾಡಬೇಕು.

    ಅರ್ಜಿ ಶುಲ್ಕ
    ಸಾಮಾನ್ಯ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 750 ರೂ. ನಿಗದಿಪಡಿಸಿದ್ದು, ಎಸ್‌ಸಿ-ಎಸ್‌ಟಿ, ಪ್ರವರ್ಗ1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಅರ್ಜಿಶುಲ್ಕ ಪಾವತಿಸಲು ಏ.13ರವರೆಗೆ ಅವಕಾಶವಿರುತ್ತದೆ.

    ಆಯ್ಕೆ ಪ್ರಕ್ರಿಯೆ
    ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (common aptitude test) ಯಲ್ಲಿ ಗಳಿಸುವ ಶೇ.75 ಅಂಕ ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿರುವ ಶೇ.25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಮೀಸಲಾತಿ ಅನುಸಾರ 1:5 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದೇಹದಾರ್ಢ್ಯತೆ ಪರಿಶೀಲಿಸಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

    ಪ್ರಮುಖ ಮಾಹಿತಿ
    ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ವೃತ್ತಿ ತರಬೇತಿ ಎಂದು ನಿಯೋಜಿಸಲಾಗುತ್ತದೆ. ನಂತರ 2ವರ್ಷಗಳ ಅವಧಿಗೆ ಕಾಯಂ ಪೂರ್ವ ಪರೀಕ್ಷಾರ್ಥವಾಗಿ ನೇಮಕಗೊಳಿಸಲಾಗುವುದು. ಈ ಸೇವೆ ತೃಪ್ತಿಕರವಾದರೆ ಪ್ರಾಧಿಕಾರದಿಂದ ಕಾಯಂಗೊಳಿಸಲಾಗುತ್ತದೆ.

    ಅರ್ಜಿ ಸಲ್ಲಿಕೆ ಪ್ರಾರಂಭ: 10-03-2024
    ಅರ್ಜಿ ಸಲ್ಲಿಕೆಗೆ ಕೊನೇ ದಿನ: 10-04-2024

    ಹೆಚ್ಚಿನ ಮಾಹಿತಿಗಾಗಿ: https://mybmtc.karnataka.gov.in ಅಥವಾ http://kea.kar.nic.in 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts