More

    ಎಸ್‌ಎಐಎಲ್‌ನಿಂದ ನೇಮಕಾತಿ ಪ್ರಕ್ರಿಯೆ ಆರಂಭ; ಆಯ್ಕೆಯಾದ ಅಭ್ಯರ್ಥಿಗಳು ಪಡೆಯುವ ವೇತನವೆಷ್ಟು?

    ಬೆಂಗಳೂರು: ಸ್ಟೀಲ್ ಅಥಾರಿಟಿ ಆ್ ಇಂಡಿಯಾ ಲಿಮಿಟೆಡ್ (SAIL) ಸರ್ಕಾರಿ ನಿಯಂತ್ರಿತ ಅತೀ ದೊಡ್ಡ ಉಕ್ಕು ತಯಾರಿಕಾ ಕಂಪನಿಯಾಗಿದ್ದು, ರಾಷ್ಟ್ರದ ಪ್ರಮುಖ ಲಾಭದಾಯಕ ಐದು ಕಾರ್ಪೊರೇಟ್ ಕಂಪನಿಗಳಲ್ಲಿ ಒಂದಾಗಿದೆ. 1973 ಜನವರಿ 24ರಂದು ರೂಪಿತವಾದ ಈ ಸಂಸ್ಥೆಯು ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಜನವರಿ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆ: 84

    ಹುದ್ದೆಗಳ ವಿವರ
    ಕನ್ಸಲ್ಟೆಂಟ್ 10
    ಮ್ಯಾನೇಜರ್ 20
    ಮೆಡಿಕಲ್ ಆಫೀಸರ್ 8
    ಅಸಿಸ್ಟೆಂಟ್ ಮ್ಯಾನೇಜರ್ 1
    ಆಪರೇಟರ್ ಟೆಕ್ನಿಷಿಯನ್ 10
    ಅಟೆಂಡೆಂಟ್ ಟೆಕ್ನಿಷಿಯನ್ 35

    ವಿದ್ಯಾರ್ಹತೆ
    ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಅಭ್ಯರ್ಥಿಯು ಎಂಬಿಬಿಎಸ್/ಪಿಜಿ/ಡಿಎನ್‌ಬಿ/ಬಿಇ/ಬಿಟೆಕ್/ಪದವಿ/ಡಿಪ್ಲೊಮಾ/ಐಟಿಐ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಯು 1-7 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

    ವಯೋಮಿತಿ, ವೇತನ
    ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ವಯಸ್ಸು ಕನಿಷ್ಠ 28 – ಗರಿಷ್ಠ 41 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25,070ರೂ.ನಿಂದ 2,20,000ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ
    ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ/ಟ್ರೇಡ್ ಟೆಸ್ಟ್ ಮತ್ತು ಸಂದರ್ಶನಕ್ಕೆ ಒಳಪಡಿಸಿ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ/ಅರ್ಜಿ ಸಲ್ಲಿಕೆ
    www.sail.co.in

    ಅರ್ಜಿ ಸಲ್ಲಿಸಲು ಕೊನೇ ದಿನ: 30-01-2024

    Jobs: ಆರ್‌ಪಿಎಫ್​​​​ನಲ್ಲಿ 2,250 ಕಾನ್‌ಸ್ಟೆಬಲ್, ಎಸ್‌ಐ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts