ಆಗಷ್ಟೇ ಮದುವೆ ಮುಗಿದಿತ್ತು...ಪತ್ನಿಯೊಂದಿಗೆ ನೃತ್ಯ ಮಾಡುತ್ತಿದ್ದ ವರ ಮರುಕ್ಷಣವೇ ಜೀವ ಬಿಟ್ಟ...

Nizamabad 16 Feb 20
Published on

ಹೈದರಾಬಾದ್: ಆತನಿನ್ನೂ 25 ವರ್ಷದ ಯುವಕ. ಫೆ.14ರಂದು ಅದ್ದೂರಿಯಾಗಿ ಮದುವೆ ಮಾಡಿಕೊಂಡ. ಆದರೆ ಮದುವೆಯಾಗಿ ಕೆಲವೇ ಕ್ಷಣದಲ್ಲಿ ಸಾವನ್ನಪ್ಪಿದ್ದಾನೆ...! ಅಷ್ಟಕ್ಕೂ ಆತನಿಗೇನೂ ಕಾಯಿಲೆ ಇರಲಿಲ್ಲ.

ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಭೋದನ್​ ಎಂಬಲ್ಲಿ. ಎಂ.ಗಣೇಶ್​ ಮೃತ ವರ.

ಮದುವೆ ಮುಗಿದು ಮೆರವಣಿಗೆ ನಡೆಯುತ್ತಿತ್ತು. ನೂತನ ವಧು-ವರರು, ಸಂಬಂಧಿಕರು, ಸ್ನೇಹಿತರ ಜತೆ ಡಿಜೆ ಮ್ಯೂಸಿಕ್​ಗೆ ಡಾನ್ಸ್​ ಮಾಡುತ್ತಿದ್ದರು. ಆದರೆ ಬರುಬರುತ್ತ ಗಣೇಶ್​ಗೆ ಎದೆ ನೋವು ಶುರುವಾಗಿ ಅಲ್ಲಿಯೇ ಬಿದ್ದ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆತ ಬದುಕಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು.

ತಮ್ಮ ಮಗನಿಗೆ ಹೃದಯಸಂಬಂಧಿ ಕಾಯಿಲೆಗಳೇನೂ ಇರಲಿಲ್ಲ. ಮದುವೆ ಮೆರವಣಿಗೆ ವೇಳೆ ಹಾಕಿದ್ದ ಅಬ್ಬರದ ಸಂಗೀತದಿಂದಲೇ ಆತನಿಗೆ ಹೃದಯಾಘಾತವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.

ಗಣೇಶ್​ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಮದುವೆಗಾಗಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net