Niu Lai - ₹2 ಲಕ್ಷ ಬಜೆಟ್​, ₹41 ಕೋಟಿ ಗಳಿಕೆ!

Niu Lai
Niu Lai
Published on
Niu Lai -
ಸಿನಿಮಾ ಗೆಲುವಿನ ಸೂತ್ರವೇನು? ಕಂಟೆಂಟ್​, ಮೇಕಿಂಗ್​ ಗುಣಮಟ್ಟ, ಕಲಾವಿದರ ನಟನೆ, ಸಂಗೀತ ಎಲ್ಲವೂ ಚೆನ್ನಾಗಿರಬೇಕು ಎಂಬ ಉತ್ತರ ಬರುವುದು ಸಾಮಾನ್ಯ. ಆದರೆ, ಆ ಯಾವ ವಿಷಯದಲ್ಲೂ ಗುಣಮಟ್ಟ ಕಾಪಾಡಿಕೊಳ್ಳದ, ತೀರಾ ಕಳಪೆ ಚಿತ್ರವೊಂದು ಸದ್ಯ ಚೀನಾ ಬಾಕ್ಸಾಫಿಸಿನಲ್ಲಿ ಗೆದ್ದು ಬೀಗುತ್ತಿದೆ. ಹೆಸರು "ನಿಯು ಲಾಯ್​'. ಕಳೆದ ಆ. 5ರಂದು ಚೀನಾದಲ್ಲಿ ರಿಲೀಸ್​ ಆಗಿರುವ ಮಂಡಾರಿನ್​ ಭಾಷೆಯ "ನಿಯು ಲಾಯ್​' (ದ ಆಕ್ಸ್​ ಈಸ್​ ಕಮಿಂಗ್​) ಆ್ಯನಿಮೇಟೆಡ್​ ಚಿತ್ರ ಸದ್ಯ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ತಾಯಿ ಕ್ಸಿನ್​ ಯುಮೆಂಗ್​ ಮತ್ತು ಮಗ ಸುನ್​ ಲಿಫಾಂಗ್​ ಇಬ್ಬರೇ ಸೇರಿ ಕೇವಲ ಎರಡು ಲಕ್ಷ ರೂ. ಬಜೆಟ್​ನಲ್ಲಿ 86 ನಿಮಿಷದ ಈ ಸಿನಿಮಾ ಮಾಡಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಗೀತ, ನಿರ್ದೇಶನ, ಹಿನ್ನೆಲೆ ಧ್ವನಿ ಸೇರಿ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಹಾಗೇ ಯಾವುದೇ ಟೀಸರ್​, ಟ್ರೇಲರ್​ ಇಲ್ಲದೇ ಪ್ರಚಾರವನ್ನೂ ಮಾಡದೇ ಚಿತ್ರವನ್ನು ಆ. 5ರಂದು 245 ಥಿಯೇಟರ್​ಗಳಲ್ಲಿ ರಿಲೀಸ್​ ಮಾಡಲಾಗಿತ್ತು. ಕಳಪೆ ಗುಣಮಟ್ಟದ ಆ್ಯನಿಮೇಷನ್​ನಿಂದಾಗಿ ಮೊದಲ ಒಂಬತ್ತು ದಿನಗಳಲ್ಲಿ ಕೇವಲ 236 ಪ್ರೇಕ್ಷಕರು ಚಿತ್ರವನ್ನು ನೋಡಿದ್ದು, ₹1 ಲಕ್ಷ ಕಲೆಕ್ಷನ್​ ಮಾಡಿಕೊಂಡಿತ್ತು. ಹೀಗಾಗಿ ಆ. 4ರಂದು ಕೇವಲ 4 ಸ್ಕ್ರೀನ್​ಗಳಿಗೆ ಪ್ರದರ್ಶನ ಇಳಿಸಲಾಗಿತ್ತು. ಆದರೆ, ರಾತ್ರೋರಾತ್ರಿ ಈ ಸಿನಿಮಾ ಅದೆಷ್ಟರ ಮಟ್ಟಿಗೆ ನೆಗಟಿವ್​ ರೇಟಿಂಗ್​ ಮತ್ತು ಟ್ರೋಲ್​ಗೆ ಒಳಗಾಯಿತೆಂದರೆ, ಆ. 15ರಿಂದ ಜನ ಚಿತ್ರ ಇನ್ನೆಷ್ಟು ಕೆಟ್ಟದಾಗಿ ಇರಬಹುದು ಎಂಬುದನ್ನು ಥಿಯೇಟರ್​ನಲ್ಲೇ ನೋಡಿ ತಿಳಿದುಕೊಳ್ಳಲು, ಮುಗಿಬಿದ್ದರು. ಸದ್ಯ ಥಿಯೇಟರ್​ ಸಂಖ್ಯೆ 360 ಮೀರಿದ್ದು, ಕಳೆದ ನಾಲ್ಕು ದಿನಗಳಲ್ಲಿ ಚಿತ್ರದ ಕಲೆಕ್ಷನ್​ ಬರೋಬ್ಬರಿ ₹41 ಕೋಟಿ ದಾಟಿದೆ! ಆ ಮೂಲಕ ಅಮ್ಮ&ಮಗನ ಅದೃಷ್ಟವೇ ಬದಲಾಗಿದೆ. ವಿಶ್ವ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಲಾಭ ಮಾಡಿದ ಚಿತ್ರ ಎಂಬ ದಾಖಲೆ ಸೃಷ್ಟಿಸಿದ್ದು, ಈ ವರ್ಷ ತೆರೆಕಂಡ ಆ್ಯನಿಮೇಟೆಡ್​ ಸಿನಿಮಾಗಳ ಪೈಕಿ ಅತಿಹೆಚ್ಚು ಕಲೆಕ್ಷನ್​ ಮಾಡಿಕೊಂಡ ಸಿನಿಮಾಗಳ ಸಾಲಿಗೆ ಸೇರಿದೆ. ಹಾಗೇ ಆ. 14ರಂದು ಚೀನಾದಲ್ಲಿ ಬಿಡುಗಡೆಯಾದ ಕ್ರಿಸ್ಟೋರ್​ ನೋಲನ್​ರ "ದ ಒಡಿಸ್ಸಿ'ಗೂ ಬಾಕ್ಸಾಫಿಸಿನಲ್ಲಿ "ನಿಯು ಲಾಯ್​' ಸವಾಲು ಹಾಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net