ಈ ರಾಶಿಯವರು ಇಂದು ಸುಳ್ಳು ಹೇಳಿದರೆ ಗ್ಯಾರಂಟಿ ಸಿಕ್ಕಿಬೀಳುತ್ತೀರಿ

Nitya-Bhavishya-vvani-1-2-1
Published on

ಮೇಷ: ಮನೆಯಲ್ಲಿ ಗಡಿಬಿಡಿ ಹೆಚ್ಚಾಗುತ್ತದೆ. ತಾಳ್ಮೆ ಕಡಿಮೆ ಆಗುತ್ತದೆ. ಆದರೆ ಮಕ್ಕಳ ಮೇಲೆ ರೇಗಲು ಹೋಗದಿರಿ. ಅದೃಷ್ಟಸಂಖ್ಯೆ: 6

ವೃಷಭ: ನಿಮ್ಮದೇ ಆದ ಹಲವಾರು ರೀತಿಯ ಬೇಜವಾಬ್ದಾರಿತನಗಳಿಂದಾಗಿ ಸಿಗಲಿರುವಂಥ ಧನಲಾಭವು ಕೈ ತಪ್ಪುತ್ತದೆ. ಅದೃಷ್ಟಸಂಖ್ಯೆ: 9

ಮಿಥುನ: ನಿಮ್ಮಲ್ಲಿನ ಕಾರ್ಯದಕ್ಷತೆಯನ್ನು ಕಂಡು ಮೆಚ್ಚಿದ ಹಿರಿಯರು ನಿಮಗೆ ಹೆಚ್ಚಿನದಾದ ಜವಾಬ್ದಾರಿಯನ್ನು ನೀಡುತ್ತಾರೆ. ಅದೃಷ್ಟಸಂಖ್ಯೆ: 2

ಕಟಕ: ನಿಮ್ಮ ಕನಸಿನ ಯೋಜನೆಗಳಿಗೆ ಅನುಕೂಲ ಒದಗಿಸುವಂತಹ ದೂರಪ್ರಯಾಣವೊಂದು ಬೇಗನೆ ಒದಗಿಬರುತ್ತದೆ. ಅದೃಷ್ಟಸಂಖ್ಯೆ: 1

ಸಿಂಹ:  ವಿವಾದಗಳ ಸಂಬಂಧವಾಗಿ ಸಂಧಾನ ಮಾಡಿಸಿಕೊಡಿ ಎಂದು ಕೇಳಲು ಬಳಗದವರು ನಿಮ್ಮ ಬಳಿಗೆ ಬರಲಿದ್ದಾರೆ. ಅದೃಷ್ಟಸಂಖ್ಯೆ: 7

ಕನ್ಯಾ: ಅನಿರೀಕ್ಷಿತವಾದ ತೊಂದರೆಗೆ ಒಳಗಾದ ನಿಮಗೆ ಅಪರಿಚಿತರೇ ಹೆಚ್ಚಿನ ಸಹಾಯ, ಸಹಕಾರವನ್ನು ನೀಡುತ್ತಾರೆ. ಅದೃಷ್ಟಸಂಖ್ಯೆ: 3

ತುಲಾ: ನಿಮ್ಮ ಮಾತುಗಳು ಅಪಾರ್ಥಕ್ಕೆ ದಾರಿ ಮಾಡಿಕೊಡಬಹುದು. ಹೀಗಾಗಿ ಅನಗತ್ಯ ಮಾತಾಡದೆ ಮೌನವಾಗಿರಿ. ಅದೃಷ್ಟಸಂಖ್ಯೆ: 5

ವೃಶ್ಚಿಕ: ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತಿರುವ ಅನುಭವವಾಗಬಹುದು. ಆದರೆ ಬೇಸರಪಡದಿರಿ. ಅದೃಷ್ಟಸಂಖ್ಯೆ: 1

ಧನುಸ್ಸು: ಕೆಲವು ಕೆಲಸಕಾರ್ಯಗಳು ಬಹಳ ಸಲೀಸಾಗಿ ನೆರವೇರುತ್ತವೆ. ಕುಲದೇವತೆಯನ್ನು ಭಕ್ತಿಯಿಂದ ಧ್ಯಾನ ಮಾಡಿ. ಅದೃಷ್ಟಸಂಖ್ಯೆ: 4

ಮಕರ: ನಿಮಗೆ ಅತ್ಯಂತ ಪ್ರೀತಿಪಾತ್ರರಾದವರು ಭೇಟಿಯಾಗುತ್ತಾರೆ. ಹೊಸ ವಿಷಯಗಳ ಮಾಹಿತಿಯೂ ಸಿಗಬಹುದು. ಅದೃಷ್ಟಸಂಖ್ಯೆ: 6

ಕುಂಭ: ಕೆಲವರು ನಿಮ್ಮ ಮನಸ್ಸಿಗೆ ಬೇಸರ ಉಂಟಾಗುವಂತೆ ಮಾತನಾಡುತ್ತಾರೆ. ನಂತರ ಅವರೇ ಕ್ಷಮೆ ಕೇಳುತ್ತಾರೆ. ಅದೃಷ್ಟಸಂಖ್ಯೆ: 9

ಮೀನ: ಸುಳ್ಳು ಹೇಳಿದರೆ ಸಿಕ್ಕಿಬೀಳುವಿರಿ. ಆದರೆ ಸತ್ಯಸಂಗತಿಯನ್ನು ಹೇಳುವುದರಿಂದ ನಿಮಗೇನೂ ನಷ್ಟವಾಗದು. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net