More

    1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

    ಬೆಂಗಳೂರು: ಕರೋನಾ ವೈರಸ್​ Covid19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳ ಒಂದರಿಂದ 6ನೇ ತರಗತಿ ವರೆಗಿನ ಮಕ್ಕಳಿಗೆ ಇಂದಿನಿಂದ ಅನ್ವಯವಾಗುವಂತೆ ಬೇಸಿಗೆ ರಜೆ ಘೋಷಿಸಲಾಗಿತ್ತು. ಅದೇ ರೀತಿ 7ರಿಂದ 9ನೇ ತರಗತಿ ತನಕದ ಮಕ್ಕಳಿಗೆ ನಾಳೆಯಿಂದ ಸ್ಟಡೀ ಲೀವ್ ಘೋಷಿಸಿದ್ದು, ಮಾರ್ಚ್ 23ರ ಒಳಗೆ ಈ ತರಗತಿಗಳ ಪರೀಕ್ಷೆ ಮುಗಿಸುವಂತೆ ಸೂಚಿಸಿತ್ತು. ಈಗ ಈ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಇಡೀ ರಾಜ್ಯಕ್ಕೇ ಅನ್ವಯಿಸಿ ಹೊಸ ಸುತ್ತೋಲೆಯನ್ನು ಪ್ರಕಟಿಸಿದೆ.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 1 ರಿಂದ 6 ನೇ ತರಗತಿ ವಿದ್ಯಾರ್ಥಿಗಳಿಗೆ ಈಗಾಗಲೇ ರಜೆ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಎಫ್​ಎ 1, ಎಫ್​ಎ2, ಎಫ್​ಎ3, ಎಫ್​ಎ 4 ಹಾಗೂ ಎಸ್​ಎ 1ರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶ್ರೇಣಿಕೃತ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗೆ ಬಡ್ತಿ ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

    1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

    1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

    ಕರೊನಾ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದಲೇ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts