

ಮೇಷ: ಸಾರ್ವಜನಿಕ ಕ್ಷೇತ್ರದಲ್ಲಿ ಕೀರ್ತಿ ವೃದ್ಧಿ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ ಹೆಗಲೇರಲಿದೆ. ಶುಭಸಂಖ್ಯೆ: 9
ವೃಷಭ: ಹಲವು ದಿನಗಳಿಂದ ಹಾತೊರೆಯುತ್ತಿದ್ದ ಕನಸಿನ ಸಾಕಾರ. ಮಕ್ಕಳ ವಿಷಯದಲ್ಲಿ ಅಸಡ್ಡೆ ಬೇಡ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 1
ಮಿಥುನ: ಅನಿರೀತಕ್ಷವಾಗಿ ಆರೋಗ್ಯ ಸಮಸ್ಯೆ. ವ್ಯಾಪಾರ- ವ್ಯವಹಾರದಲ್ಲಿ ಅಡಚಣೆ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 5
ಕಟಕ: ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ಕುಟುಂಬದೊಂದಿಗೆ ಕೂತು ಮಾತನಾಡಿ. ಹಣಕಾಸಿನ ಗೊಂದಲ ಇತ್ಯರ್ಥ. ಶುಭಸಂಖ್ಯೆ: 6
ಸಿಂಹ: ಯತ್ನ ಕಾರ್ಯಗಳಲ್ಲಿ ಅಲ್ಪ ಪ್ರಗತಿ. ವ್ಯಾಪಾರಸ್ಥರಿಗೆ ಲಾಭ. ಆತ್ಮೀಯ ಸ್ನೇಹಿತನ ಭೇಟಿ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 8
ಕನ್ಯಾ: ತಪ್ಪು ನಿರ್ಧಾರಗಳಿಂದ ಸಮಸ್ಯೆ. ವ್ಯಾಪಾರ ವಹಿವಾಟುಗಳಲ್ಲಿ ಕೆಲಸಗಾರರಿಂದ ತೊಂದರೆ. ಆತ್ಮೀಯರೊಂದಿಗೆ ಭೋಜನ. ಶುಭಸಂಖ್ಯೆ: 3
ತುಲಾ: ರಾಜಕೀಯ ರಂಗದಲ್ಲಿ ಇರುವವರಿಗೆ ಮಹತ್ವದ ಜವಾಬ್ದಾರಿ. ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ. ಶುಭಸಂಖ್ಯೆ: 6
ವೃಶ್ಚಿಕ: ವಿಶೇಷ ವ್ಯಕ್ತಿಯ ಭೆೇಟಿ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ. ಶುಭಸಂಖ್ಯೆ: 3
ಧನಸ್ಸು: ಧರ್ಮಕಾರ್ಯದಲ್ಲಿ ಆಸಕ್ತಿ. ನಕಾರಾತ್ಮಕ ಚಿಂತನೆಯಿಂದ ದೂರವಿರಿ. ಸೇವಕ ವರ್ಗದಿಂದ ಕಿರುಕುಳ ಉಂಟಾಗಬಹುದು. ಶುಭಸಂಖ್ಯೆ: 6
ಮಕರ: ವೈವಾಹಿಕ ಸಮಸ್ಯೆಯನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಪರಿಹಾರ ಸಿಗುತ್ತದೆ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 5
ಕುಂಭ: ಮಕ್ಕಳೊಂದಿಗೆ ಮೃದುವಾಗಿ ವತಿರ್ಸಿ. ಹಲವು ದಿನಗಳಿಂದ ನಿರೀಸಿದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಕೆಲಸಕ್ಕೆ ಪ್ರಶಂಸೆ. ಶುಭಸಂಖ್ಯೆ: 4
ಮೀನ: ವ್ಯಾಪಾರದಲ್ಲಿ ಅನವಶ್ಯಕ ಧನ ನಷ್ಟ, ಕುಟುಂಬದೊಂದಿಗೆ ಧಾಮಿರ್ಕ ಆಚರಣೆ. ಮಕ್ಕಳೊಂದಿಗೆ ಮೃದುವಾಗಿರಿ. ಶುಭಸಂಖ್ಯೆ: 2.