ನಿತ್ಯ ಭವಿಷ್ಯ: ಈ ರಾಶಿಯವರ ಮನಸ್ಸು ಹತೋಟಿಯಲ್ಲಿರಲ್ಲ...

Nitya-Bhavishya-vvani-1-2-1
Published on

ಮೇಷ:  ಆಪ್ತರ ಮೇಲೆಯೇ ಮುನಿಸಿಕೊಳ್ಳುತ್ತೀರಿ. ಎಷ್ಟು ಸಮಜಾಯಿಷಿ ನೀಡಿದರೂ ಒಪ್ಪುವುದಿಲ್ಲ. ನೀವು ಮಾಡಿದ್ದೇ ಹಠ. ಅದೃಷ್ಟ ಸಂಖ್ಯೆ: 9

ವೃಷಭ: ದೂರದ ಸಂಬಂಧಿಕರು ಅಥವಾ ಸ್ನೇಹಿತರ ಆಗಮನ ಸಾಧ್ಯತೆ. ಸಂತಸದ, ನೆಮ್ಮದಿಯ ವಾತಾವರಣ ಇರುತ್ತದೆ. ಅದೃಷ್ಟ ಸಂಖ್ಯೆ: 2

ಮಿಥುನ: ಎಚ್ಚರದಿಂದ ಇರಬೇಕು. ವ್ಯಾಪಾರ ಮಾಡಲು ಹೋಗಿ ಎಡವಟ್ಟಾಗಬಹುದು. ಅರಿಯದೆ ಮೋಸ ಹೋದೀರಿ. ಅದೃಷ್ಟ ಸಂಖ್ಯೆ: 5

ಕಟಕ: ಅತ್ಯಂತ ಪ್ರೀತಿಪಾತ್ರ ವಿಚಾರಗಳಲ್ಲಿ ಸಹ ಆಸಕ್ತಿ ಕಳೆದುಕೊಳ್ಳುತ್ತೀರಿ. ಇತರರಿಂದ ಉಪದೇಶದ ಮಾತುಗಳು ಲಭಿಸುತ್ತವೆ. ಅದೃಷ್ಟ ಸಂಖ್ಯೆ: 7

ಸಿಂಹ:ಕಾಲು ಕೆರೆದು ಜಗಳ ಮಾಡುವವರಿದ್ದಾರೆ. ಏನೂ ಹೇಳಲು ತೋಚದೆ ನಿಮ್ಮದೇ ತಪ್ಪು ಎಂದು ಸುಮ್ಮನಾಗುತ್ತೀರಿ. ಅದೃಷ್ಟ ಸಂಖ್ಯೆ: 6

ಕನ್ಯಾ: ಆಗಬೇಕಾದ ಕೆಲಸಕಾರ್ಯಗಳು ಆಗುತ್ತವೆ. ಆದರೆ ನಿರೀಕ್ಷಿಸಿದ ಪ್ರಮಾಣದಲ್ಲಿ ಲಾಭ ಆಗದು ಎಂದು ಬೇಸರವಾದೀತು. ಅದೃಷ್ಟ ಸಂಖ್ಯೆ: 7

ತುಲಾ: ಮುಖ್ಯ ವಿಚಾರವನ್ನು ಗೌಪ್ಯವಾಗಿಡಬೇಕಾದ ಅನಿವಾರ್ಯವಿದೆ. ಹೊರಗೆ ಹೇಳಿಕೊಳ್ಳಲಾಗದೆ ತೊಳಲಾಡುವಿರಿ. ಅದೃಷ್ಟ ಸಂಖ್ಯೆ: 3

ವೃಶ್ಚಿಕ: ಪ್ರೀತಿಪಾತ್ರರು ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡದೆ ನಡೆದುಕೊಳ್ಳುವ ರೀತಿಯು ಸಂತಸ, ಸಮಾಧಾನ ತರುತ್ತದೆ. ಅದೃಷ್ಟ ಸಂಖ್ಯೆ: 1

ಧನುಸ್ಸು: ಮನಸ್ಸು ಹತೋಟಿಯಲ್ಲಿಲ್ಲ. ಹತೋಟಿಗೆ ತರುವಷ್ಟರಲ್ಲಿ ದಿನವೇ ಮುಗಿದೀತು. ದೂರಪ್ರಯಾಣ ಸಾಧ್ಯತೆ. ಅದೃಷ್ಟ ಸಂಖ್ಯೆ: 5

ಮಕರ: ವಿವಾಹಿತರಿಗೆ ಸಂಗಾತಿಯಿಂದ, ಅವಿವಾಹಿತರಿಗೆ ಮಿತ್ರರಿಂದ ಲಾಭ ಇದೆ. ಕ್ಷೇತ್ರದರ್ಶನ ಭಾಗ್ಯವಿದೆ. ಅದೃಷ್ಟ ಸಂಖ್ಯೆ: 3

ಕುಂಭ: ಸುಳ್ಳು ಹೇಳಿದರೂ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು. ಆರೋಗ್ಯದತ್ತ ಗಮನವಿರಲಿ. ಹೊಟ್ಟೆನೋವು ಬಂದೀತು. ಅದೃಷ್ಟ ಸಂಖ್ಯೆ: 4

ಮೀನ: ವೃತ್ತಿಯಲ್ಲಿ ಮೇಲುಗೈ ಸಾಧಿಸುತ್ತೀರಿ. ವ್ಯಾಪಾರ ಮಾಡುವವರಿಗೂ ಲಾಭ. ಸಾಲ ಕೊಡುವ ಮುನ್ನ ಒಮ್ಮೆ ಯೋಚಿಸಿ. ಅದೃಷ್ಟ ಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net