ನಿತ್ಯ ಭವಿಷ್ಯ| ಈ ರಾಶಿಯವರಿಗೆ ಇಂದು ಸ್ತ್ರೀಯರಿಂದ ಲಾಭ

Nitya-Bhavishya-vvani-1-2-1-1
Published on

ಮೇಷ: ಆಧ್ಯಾತ್ಮಿಕ ಚಿಂತನೆ, ಧರ್ಮಕಾರ್ಯಾಸಕ್ತಿ, ದೂರ ಪ್ರಯಾಣ, ಉನ್ನತ ವಿದ್ಯಾಯೋಗ, ಶುಭಕಾರ್ಯಗಳಿಗೆ ಖರ್ಚು. ಶುಭಸಂಖ್ಯೆ: 5

ವೃಷಭ: ಅನಿರೀಕ್ಷಿತ ಲಾಭ. ಉದ್ಯೋಗ ಪ್ರಾಪ್ತಿ. ಅಡೆತಡೆ ಇದ್ದರೂ ಜಯ. ಅನಾರೋಗ್ಯ. ಆರ್ಥಿಕ ಅನುಕೂಲ. ಮಿತ್ರರಿಂದ ಸಹಕಾರ. ಶುಭಸಂಖ್ಯೆ: 9

ಮಿಥುನ: ಉದ್ಯೋಗ ನಷ್ಟ ಮತ್ತು ಚಿಂತೆ ಕಾಡಲಿದೆ. ಪ್ರೀತಿ-ಪ್ರೇಮದಲ್ಲಿ ತೊಂದರೆಯಾದೀತು. ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 2

ಕಟಕ: ಸ್ಥಿರಾಸ್ತಿ ತೊಂದರೆ. ತಂದೆಯಿಂದ ಸಹಾಯ. ಕಾರ್ಯಜಯ. ಸಾಲ ಮಾಡುವ ಸಾಧ್ಯತೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಸಿಂಹ: ಕೋರ್ಟ್​ಗೆ ಅಲೆದಾಟ. ನಿರಾಸೆ. ನೆರೆಹೊರೆಯವ ರಿಂದ ತೊಂದರೆ. ಮಕ್ಕಳಿಂದ ಎಡವಟ್ಟುಗಳು. ಸ್ತ್ರೀಯರಿಂದ ಅಪವಾದ. ಶುಭಸಂಖ್ಯೆ: 1

ಕನ್ಯಾ: ಪಾಲುದಾರಿಕೆಯಲ್ಲಿ ತೊಡಕು. ಆರ್ಥಿಕ ಅಲ್ಪ ಚೇತರಿಕೆಯಾಗಲಿದೆ. ಸಾಲ ದೊರೆಯುವುದು. ಮಾತಿನಿಂದ ತೊಂದರೆಯಾದೀತು. ಶುಭಸಂಖ್ಯೆ: 4

ತುಲಾ: ಆರೋಗ್ಯ ಚೇತರಿಕೆ ಕಾಣಲಿದೆ. ಆರ್ಥಿಕ ಹೂಡಿಕೆಯ ತಯಾರಿ. ಅಧ್ಯಾತ್ಮದತ್ತ ಒಲವು ತೋರುವಿರಿ. ಶತ್ರುಗಳು ಮಿತ್ರರಾಗುವರು. ಶುಭಸಂಖ್ಯೆ: 7

ವೃಶ್ಚಿಕ: ಆಧ್ಯಾತ್ಮಿಕವಾಗಿ ಖರ್ಚುಗಳು ಕಂಡುಬರುವವು. ಮಕ್ಕಳಲ್ಲಿ ಮಂದತ್ವ ಕಾಡಬಹುದು. ರಹಸ್ಯ ಯೋಜನೆಗಳು. ಆರ್ಥಿಕ ಪ್ರಗತಿ. ಶುಭಸಂಖ್ಯೆ: 3

ಧನುಸ್ಸು: ಗುಪ್ತ ಧನಾಗಮನವಾಗಿ ಸಂತಸ. ಸ್ತ್ರೀಯರಿಂದ ಲಾಭ. ಆರೋಗ್ಯದಲ್ಲಿ ಚೇತರಿಕೆಯಾಗಿ ಸಮಾಧಾನ. ಸ್ಥಿರಾಸ್ತಿ ವಾಹನ ಯೋಗ. ಶುಭಸಂಖ್ಯೆ: 6

ಮಕರ: ದೂರ ಪ್ರಯಾಣ ಸಾಧ್ಯತೆ. ನೆರೆಹೊರೆಯವರಿಂದ ಅಂತರ. ಗೌರವಕ್ಕೆ ಧಕ್ಕೆ. ಆರ್ಥಿಕ ನಷ್ಟ. ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 2

ಕುಂಭ: ಆರ್ಥಿಕ ಚೇತರಿಕೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಪ್ರಯಾಣದಲ್ಲಿ ವಿಘ್ನ. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡೀತು. ಶುಭಸಂಖ್ಯೆ: 1

ಮೀನ: ಆಕಸ್ಮಿಕ ಅನಾಹುತಗಳು, ಅಪರಾಧಗಳು. ಸೋಲು. ವ್ಯವಹಾರದಲ್ಲಿ ಸಮಸ್ಯೆ ಉಂಟಾಗಿ ಯತ್ನ ಕಾರ್ಯ ವಿಳಂಬವಾಗುವುದು. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net