ನಿತ್ಯಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಅನಾರೋಗ್ಯ ಸಮಸ್ಯೆ ಕಾಡಬಹುದು

Nitya-Bhavishya-vvani-1-2-1-1
Published on
ಮೇಷ: ಬಂಧು -ಮಿತ್ರರ ಸಹಾಯ. ವ್ಯರ್ಥ ಧನಹಾನಿ ಸಾಧ್ಯತೆ. ಮಗಳ ವಿವಾಹದ ಪ್ರಯತ್ನ ವಿಫಲ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 4

ವೃಷಭ: ಸಂತೋಷದ ವಾತಾವರಣ. ಹಿತ ಶತ್ರುಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವರು. ದಿನಾಂತ್ಯದಲ್ಲಿ ಹಿತಕರ ವಿದ್ಯಮಾನ. ಶುಭಸಂಖ್ಯೆ: 3

ಮಿಥುನ: ಮಕ್ಕಳಿಂದ ಅಧಿಕ ಖರ್ಚು. ಸಾಲಗಾರರಿಂದ ಬೈಗುಳ ಕೇಳಬೇಕಾದೀತು. ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದು ಸಕಾಲ. ಶುಭಸಂಖ್ಯೆ: 7

ಕಟಕ: ಸಾರ್ವಜನಿಕ ರಂಗದಲ್ಲಿ ಅಪವಾದ ಕೇಳಿಬಂದು ಬೇಸರ. ನಿರೀೆಗೂ ಮೀರಿ ಧನಸಂಗ್ರಹ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 8

ಸಿಂಹ: ಮಕ್ಕಳೊಂದಿಗೆ ಮನಸ್ತಾಪ. ಕಲಾವಿದರಿಗೆ ಹಿತಶತ್ರುಗಳಿಂದ ಕಿರಿಕಿರಿ. ಅವಿವಾಹಿತರಿಗೆ ವಿವಾಹದ ಪ್ರಯತ್ನದಲ್ಲಿ ಕಾರ್ಯಸಿದ್ದಿ. ಶುಭಸಂಖ್ಯೆ: 2

ಕನ್ಯಾ: ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಆರೋಗ್ಯದಲ್ಲಿ ಗಣನೀಯ ಚೇತರಿಕೆ. ಬಂಧು ಮಿತ್ರರ ಸಹಾಯ ಸಿಗುವುದು. ಶುಭಸಂಖ್ಯೆ: 6

ತುಲಾ: ಅನವಶ್ಯಕ ಮಾತು ಸಲ್ಲ. ವಿರೋಧಿಗಳಿಗೆ ಕಾರ್ಯವೈಖರಿಯಿಂದ ಉತ್ತರ ಕೊಡಿ. ಭೂ ವ್ಯವಹಾರದಲ್ಲಿ ಮೋಸದ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ಮನೋಕ್ಲೇಶ ಉಂಟಾಗುವ ಘಟನೆ ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಪ್ರತಿಭಾನ್ವಿತರಿಗೆ ಅವಕಾಶಗಳ ಮಹಾಪೂರ. ಶುಭಸಂಖ್ಯೆ: 4

ಧನು: ಸಹೋದರರೊಂದಿಗೆ ವೈಮನಸ್ಯ. ಬಹುದಿನದಿಂದ ಇರುವ ರೋಗದ ಬಗ್ಗೆ ವೈದ್ಯರ ಸಲಹೆ ಪಾಲಿಸಿ.ಗಾಯಕರಿಗೆ ಧನಲಾಭ. ಶುಭಸಂಖ್ಯೆ: 6

ಮಕರ: ಮನೆಯ ಕೆಲಸಗಳಲ್ಲಿ ಪ್ರಗತಿ ಇಲ್ಲ. ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ದಿ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಆಶಾಕಿರಣ. ಶುಭಸಂಖ್ಯೆ: 2

ಕುಂಭ: ಬಂಧುಗಳು ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಸಹೋದ್ಯೋಗಿಗಳಿಂದ ಮೇಲಧಿಕಾರಿಗೆ ದೂರು. ಸಂಜೆ ಶುಭ ಸುದ್ದಿ. ಶುಭಸಂಖ್ಯೆ: 9

ಮೀನ: ಕೂಡಿಟ್ಟ ಹಣದ ನಷ್ಟ. ಗುರು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಅನಿರೀಕ್ಷಿತ ಆರೋಗ್ಯ ಸಮಸ್ಯೆ ಕಾಣಿಸೀತು. ಶುಭಸಂಖ್ಯೆ: 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net