ಬೆಂಗಳೂರಿಗೆ ಆಗಮಿಸಿದ ನಿತಿನ್​ ಗಡ್ಕರಿ: ನಾಳೆ ದಶಪಥ ಹೆದ್ದಾರಿ ಪರಿಶೀಲನೆ

nitin gadkari
Published on

ಬೆಂಗಳೂರು: ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್​ ಗಡ್ಕರಿ ಅವರು ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು. ನಿತಿನ್ ಗಡ್ಕರಿ ಅವರನ್ನು ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದರು.

ರಾಮನಗರ ಜಿಲ್ಲೆಯಲ್ಲಿ ದಶಪಥ ಹೆದ್ದಾರಿಯನ್ನು ಗುರುವಾರ ನಿತಿನ್​ ಗಡ್ಕರಿ ಪರಿಶೀಲನೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್​. ಅಶ್ವತ್ಥ ನಾರಾಯಣ ಮತ್ತು ಲೊಕೋಪಯೋಗಿ ಸಚಿವ ಸಿ.ಸಿ. ಪಾಟೀಲ್​ ಜತೆ ಹೆಲಿಕಾಪ್ಟರ್​ ಮೂಲಕ ರಾಮನಗರ ಹೊರವಲಯದ ಕೆಂಪೇಗೌಡನದೊಡ್ಡಿ ಬಳಿ ಬಂದು ಇಳಿಯಲಿದ್ದಾರೆ. ಅಲ್ಲಿಂದ ಸುಮಾರು 8-10 ಕಿ.ಮೀ. ಚನ್ನಪಟ್ಟಣ ಕಡೆಗೆ ಪ್ರಯಾಣ ಬೆಳೆಸಿ, ನಂತರ ವಾಪಸ್​ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಬೆಂಗಳೂರಿಗೆ ಅದೇ ಹೆಲಿಕಾಪ್ಟರ್​ ಮೂಲಕ ವಾಪಸಾಗಲಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net