

ಚೆನ್ನೈ: ಸೌತ್ ಸಿನಿ ಇಂಡಸ್ಟ್ರಿಯ ದಿ ಮೋಸ್ಟ್ ಬಿಸಿಯೆಸ್ಟ್ ನಟಿಯರ ಪೈಕಿ ನಿತ್ಯಾ ಮೆನನ್ (Nithya Menon) ಕೂಡ ಒಬ್ಬರಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬಿಡುಗಡೆದ ಸಜ್ಜಾಗಿದೆ. ಜಯಂ ರವಿ (Jayam Ravi) ಜತೆ ನಾಯಕಿಯಾಗಿ ನಟಿಸಿರುವ ಕಾದಲಿಕ್ಕ ನೇರಮಿಲ್ಲೈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರತಂಡ ಭರ್ಜರಿ ಪ್ರಮೋಷನ್ನಲ್ಲಿ ತೊಡಗಿದೆ. ಪ್ರಚಾರದ ವೇಳೆ ನಿತ್ಯಾ ಮೆನನ್ ತಾವು ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದು, ಅದಕ್ಕೆ ಕಾರಣವನ್ನು ಉಲ್ಲೇಖಿಸಿದ್ದಾರೆ.
Behind Woods ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಿತ್ಯಾ ಮೆನನ್, ಸಿನಿಮಾ ಇಷ್ಟಪಟ್ಟಿದ್ದರಿಂದ ನಾನು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲ. ನಾನು ಈ ಕ್ಷೇತ್ರಕ್ಕೆ ಬಂದ ಮೇಲೆಯೇ ದೇವರನ್ನು ನಂಬತೊಡಗಿದೆ. ನನ್ನ ತಂದೆ ಅಜ್ಞೇಯತಾವಾದಿ, ಮತ್ತು ನಾನು ಅದೇ ರೀತಿಯಲ್ಲಿ ಬೆಳೆದೆ. ಆದರೆ ನಾನು ನಟನೆಯನ್ನು ಆರಿಸಿಕೊಂಡಾಗ, ನನಗಿಂತ ಬಲವಾದದ್ದು ನನಗೆ ಅದರಲ್ಲಿ ಮಾರ್ಗದರ್ಶನ ನೀಡುತ್ತಿದೆ ಎಂದು ನಾನು ಅರಿತುಕೊಂಡೆ. ನನಗೆ ಈ ವೃತ್ತಿ ಇಷ್ಟವಿರಲಿಲ್ಲ.
ನನಗೆ ರಾಷ್ಟ್ರಪ್ರಶಸ್ತಿ ಬರುವ ಮುನ್ನ ಚಿತ್ರರಂಗವನ್ನ ತೊರೆದು ಸಿಂಪಲ್ ಜೀವನ ಸಾಗಿಸಲು ತಯಾರಾಗಿದ್ದೆ. ಆದರೆ, ರಾಷ್ಟ್ರಪ್ರಶಸ್ತಿ ಗೆದ್ದ ನಂತರ ಸಂಪೂರ್ಣ ಬದಲಾಯಿತು. ನನ್ನ ಆಯ್ಕೆಯನ್ನು ಪೋಷಕರು ಬೆಂಬಲಿಸಿದ್ದರು. ಒಂದು ವೇಳೆ ನಾನು ಚಿತ್ರರಂಗವನ್ನ ತೊರೆದಿದ್ದರೆ ಯಾರು ಅಷ್ಟಾಗಿ ಈ ವಿಚಾರವನ್ನ ಗಮನಿಸುತ್ತಿರಲಿಲ್ಲ. ಒಂದು ವೇಳೆ ನಾನು ಚಿತ್ರರಂಗದಲ್ಲೇ ಉಳಿದುಕೊಂಡಿದ್ದೇನೆ ಅಂದರೆ ಅದು ದೇವರ ಇಚ್ಛೆ ಎಂದು ನಟಿ ನಿತ್ಯಾ ಮೆನನ್ Behind Woods ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಟಿ ನಿತ್ಯಾ ಮೆನನ್, ಜಯಂ ರವಿ ಒಟ್ಟಾಗಿ ನಟಿಸಿರುವ ಕಾದಲಿಕ್ಕ ನೇರಮಿಲ್ಲೈ ಜನವರಿ 14ರಂದು ವಿಶ್ವದಾದ್ಯಂತ ತೆರೆ ಕಾಣಲಿದ್ದು, ಈ ಚತ್ರಕ್ಕೆ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಬಂಡವಾಳ ಹೂಡಿದ್ದು, ಅವರ ಪತ್ನಿ ಕಿರುತಿಗಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದು, ಟ್ರೇಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.