ನಿರ್ದೇಶಕನ ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್! Nithya Menen Kiss On Mysskins Cheeks ವಿಡಿಯೋ ವೈರಲ್​

nithyamenen
Published on

Nithya Menen Kiss On Mysskins Cheeks: ಜಯಂ ರವಿ ಅವರ ಕದಳಿಕ್ಕ ನೆರಮಿಲ್ಲೈ ಸಿನಿಮಾ ರಿಲೀಸ್​​ಗೆ ರೆಡಿಯಾಗಿದೆ. ಈ ಚಿತ್ರತಂಡ ಟ್ರೇಲರ್​​ ಬಿಡುಗಡೆ ಕಾರ್ಯಕ್ರಮವನ್ನು ಹಬ್ಬಿಕೊಂಡಿತ್ತು. ಈ ವೇಳೆ ಭಾಗಿಯಾಗಿದ್ದ ನಟಿ ನಿತ್ಯಾ ಮೆನೆನ್​​ ಅವರನ್ನು ಪ್ರೀತಿಯಿಂದ ಅಪ್ಪಿಕೊಳ್ಳಲಿ ಬಂದ ನಿರ್ದೇಶಕರನ್ನು ತಡೆದು ನಟಿ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಕದಳಿಕ್ಕ ನೆರಮಿಲ್ಲೈ ಚಿತ್ರದ ಟ್ರೈಲರ್ ಬಿಡುಗಡೆಯು ಜನವರಿ 7 ರಂದು ಚೆನ್ನೈನಲ್ಲಿ ನಡೆಯಿತು, ಅಂದರೆ ಜನವರಿ 14 ರಂದು ಬಿಡುಗಡೆ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ. ಈ ಸಮಾರಂಭದಲ್ಲಿ ಚಿತ್ರದ ನಾಯಕ ನಟರಾದ ನಿತ್ಯಾ ಮೆನೆನ್, ಜಯಂ ರವಿ, ಸಂಗೀತ ಸಂಯೋಜಕ ಎಆರ್ ರೆಹಮಾನ್, ಅನಿರುದ್ಧ ರವಿಚಂದರ್ ಮತ್ತು ಚಲನಚಿತ್ರ ನಿರ್ದೇಶಕ ಮಿಸ್ಕಿನ್ ಇತರರು ಉಪಸ್ಥಿತರಿದ್ದರು.

ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ನಿರ್ದೇಶಕ ಮಿಸ್ಕಿನ್ (Director Mysskin) ಅವರು ಆಗಮಿಸಿದ್ದಾರೆ. ಅವರನ್ನು ನಿತ್ಯಾ ಮೆನನ್ ವೆಲ್ ಕಂ ಮಾಡಲು ಹೋಗಿದ್ದು, ಈ ವೇಳೆ ಮಿಸ್ಕಿನ್ ನಿತ್ಯಾರನ್ನು ಹಗ್ ಮಾಡಲು ಹೋಗಿದ್ದಾರೆ. ನಿತ್ಯಾ ಕೂಡಲೇ ಅವರನ್ನು ತಡೆದು, ಅಪ್ಪುಗೆಯ ಬದಲಿಗೆ ಮಿಸ್ಕಿನ್ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಮಿಸ್ಕಿನ್ ನಿತ್ಯಾ ಅವರ ಕೈಗೆ ಮುತ್ತು ಕೊಟ್ಟಿದ್ದಾರೆ.

ಇದಾದ ಬಳಿಕ ಜಯಂ ರವಿ ಅವರನ್ನು ನಿತ್ಯಾ ಹಗ್ ಮಾಡಿ ವೆಲ್ಕಂ ಮಾಡಿದ್ದಾರೆ. ಸದ್ಯ ನಿತ್ಯಾ ಮೆನನ್ ಅವರ ಈ ವಿಡಿಯೋ ವೈರಲ್ ಆಗಿದೆ.ಮಿಸ್ಕಿನ್ ಮತ್ತು ನಿತ್ಯಾ ಮೆನನ್ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಟಿ ನಿತ್ಯಾ ಹಾಗೂ ನಿರ್ದೇಶಕ ಮಿಸ್ಕಿನ್ ಉತ್ತಮ ಸ್ನೇಹಿತರಾಗಿದ್ದಾರೆ. 2020ರ ಸೈಕೋ ಚಿತ್ರದಲ್ಲಿ ಮಿಸ್ಕಿನ್ ಅವರೊಂದಿಗೆ ನಿತ್ಯಾ ಮೆನೆನ್ ಕೆಲಸ ಮಾಡಿದ್ದಾರೆ ಎಂಬುದನ್ನು ಗಮನಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net