ಬಿಜೆಪಿಗೆ ಜಾಸ್ತಿ ಸೀಟ್ ಬಂದರೂ ನಿತೀಶ್​ ಕುಮಾರ್ ನಮ್ಮ ನಾಯಕ; ಜೆ.ಪಿ.ನಡ್ಡಾ

Untitled-1
Published on

ಬಿಹಾರ: ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಪಕ್ಷಗಳ ಟೀಕೆ-ಪ್ರತಿಟೀಕೆ, ಆರೋಪ-ಪ್ರತ್ಯಾರೋಪಗಳೂ ವ್ಯಾಪಕವಾಗಿವೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಬಿಹಾರದಲ್ಲಿ ಶನಿವಾರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು, ನಿತೀಶ್ ಕುಮಾರ್ ಪರವಾಗಿ ಮತ ಕೋರಿದ್ದಲ್ಲದೆ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರವನ್ನೂ ಬಿಟ್ಟಿದ್ದಾರೆ.

ಬಿಜೆಪಿ ಪುಲ್ವಾಮಾ ದಾಳಿಯಿಂದ ಭಾರಿ ಪ್ರಯೋಜನ ಪಡೆದಿದೆ ಎಂದು ರಾಹುಲ್​ ಗಾಂಧಿ ಈ ಹಿಂದೆ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ನಡ್ಡಾ, ಕಾಂಗ್ರೆಸ್ ಇತ್ತೀಚೆಗೆ ಪಾಕಿಸ್ತಾನದ ವಕ್ತಾರನಂತೆ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ. ಇನ್ನು ಬಿಹಾರದಲ್ಲಿ ಬಿಜೆಪಿ, ಜೆಡಿಯು, ಎಚ್​ಎಎಂ, ವಿಐಪಿ ಪಕ್ಷಗಳ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 2/3 ಭಾಗ ಮತ ಗಳಿಸಲಿದೆ ಎಂಬುದಾಗಿಯೂ ಹೇಳಿದರು. ಮಾತ್ರವಲ್ಲ ಒಂದುವೇಳೆ ಬಿಜೆಪಿ ಅತ್ಯಧಿಕ ಸೀಟುಗಳನ್ನು ಗಳಿಸಿದರೂ ನಿತೀಶ್​ ಕುಮಾರ್ ಅವರೇ ನಮ್ಮ ನಾಯಕರಾಗಿರುತ್ತಾರೆ ಎಂದೂ ನಡ್ಡಾ ಹೇಳಿದರು.

ಬಿಹಾರದ 71 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಅಕ್ಟೋಬರ್ 28ರಂದು ಚುನಾವಣೆ ನಡೆದಿದ್ದು, ಉಳಿದ 172 ಕ್ಷೇತ್ರಗಳಿಗೆ ನವೆಂಬರ್ 3 ಮತ್ತು 7ರಂದು ಚುನಾವಣೆ ನಡೆಯಲಿದೆ. ನ. 10ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net