ಮಗನ ಮದುವೆ ಪೂರ್ವ ಕಾರ್ಯಕ್ರಮದಲ್ಲಿ ಕೈ ಮಗ್ಗದ ಕಾಂಚೀವರಂ ಸೀರೆಯುಟ್ಟು ಮಿಂಚಿದ ನೀತಾ ಅಂಬಾನಿ

ambani
Published on

- ಪ್ರೀತಿ- ಹಾರೈಕೆ, ಆಶೀರ್ವಾದದ ಸಂಭ್ರಮದಲ್ಲಿ

ಮುಂಬೈ: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಸೀರೆಯ ವಿಶೇಷತೆ : ಇದು ದಕ್ಷಿಣ ಭಾರತದ ನೇಕಾರರು ಕೈಯಿಂದಲೇ ಸಿದ್ಧಪಡಿಸಿದ್ದಾಗಿದೆ. ಇದನ್ನು ಕೈ ಮಗ್ಗದ ಸೀರೆ ಎನ್ನಲಾಗಿದೆ.

ಯಂತ್ರಗಳಿಂದ ಅಲ್ಲದೆ, ಕುಶಲಕರ್ಮಿಗಳು ತಮಗೆ ತಲೆತಲಾಂತರದಿಂದ ಬಂದಂಥ ಅದ್ಭುತ ಕಲೆಯನ್ನು ಮೂಡಿಸಿರುವಂಥ ಮೇರು ಕಲಾಕೃತಿ ಇದು. ಭಾರತೀಯ ಸಾಂಪ್ರದಾಯಿಕ ಕರಕುಶಲತೆ ಬಗ್ಗೆ ನೀತಾ ಅಂಬಾನಿ ಅವರಿಗೆ ಇರುವಂಥ ಗೌರವ, ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇದು ಇನ್ನೊಂದು ಸುಮಧುರ ಕ್ಷಣವಾಗಿತ್ತು.

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

ರಿಲಯನ್ಸ್ ನ ಸ್ವದೇಶ್ ಎಂಬ ಉಪಕ್ರಮವು ಸಮುದಾಯಗಳ ಕೈ ಬಲಪಡಿಸುತ್ತದೆ ಹಾಗೂ ಪಾರಂಪರಿಕ ಕರಕುಶಲತೆಯ ಸಂರಕ್ಷಣೆ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net