

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 01ರಂದು 2025-26ನೇ ಸಾಲಿನ ಆಯವ್ಯಯ (Budget) ಮಂಡಿಸಲು ಸಜ್ಜಾಗಿದ್ದು, ಸಂಸತ್ ಇತಿಹಾಸದಲ್ಲೇ ಹೊಸ ದಾಖಲೆಯನ್ನ ಬರೆಯಲು ಸಜ್ಜಾಗಿದ್ದಾರೆ. 2025-26ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಸಂಸತ್ ಇತಿಹಾಸದಲ್ಲಿ ಹೆಚ್ಚು ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಮಂತ್ರಿ ಎಂಬ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ.
ಇನ್ನೂ ಬಜೆಟ್ನ (Budget) ವಿಚಾರಕ್ಕೆ ಬರುವುದಾದರೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಮಧ್ಯಮ ವರ್ಗಕ್ಕೆ ಒಂದಷ್ಟು ರಿಯಾಯಿತಿ ನೀಡುವ ಉದ್ದೇಶದಿಂದ ಹೊಸ ತೆರಿಗೆ ಸ್ಲ್ಯಾಬ್ಗಳನ್ನು ಪರಿಚಯಿಸಬೇಕು ಎಂಬ ಬೇಡಿಕೆ ಶ್ರೀಸಾಮಾನ್ಯರದ್ದು. ಆದಾಯ ತೆರಿಗೆಯಲ್ಲಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಹಣದುಬ್ಬರಕ್ಕೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು. ಆದಾಯ ತೆರಿಗೆಗೆ ಕನಿಷ್ಠ 10 ಲಕ್ಷ ರೂ. ಮಿತಿ ಅಳವಡಿಸಬೇಕು. 15 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಮಿತಿಯನ್ನು ತಗ್ಗಿಸಬೇಕು ಎಂಬ ಆಗ್ರಹಕ್ಕೆ ವಿತ್ತ ಸಚಿವರ ಸ್ಪಂದನೆ ಹೇಗಿರುತ್ತದೆ ಎಂಬುದಕ್ಕೆ ಫೆ.1ರ ಬಜೆಟ್ನಲ್ಲಿ ಉತ್ತರ ಸಿಗಲಿದೆ.
ನಿರ್ಮಲಾ ಸೀತಾರಾಮನ್ಗೂ ಮೊದಲು ಮೊರಾರ್ಜಿ ದೇಸಾಯಿ (10), ಕಾಂಗ್ರೆಸ್ನ ಚಿದಂಬರಂ (09), ಪ್ರಣಭ್ ಮುಖರ್ಜಿ (09), ಯಶ್ವಂತ್ ಸಿನ್ಹಾ (07), ಸಿ.ಡಿ. ದೇಶ್ಮುಖ್ (07), ಮನಮೋಹನ್ ಸಿಂಗ್ (05) ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಇದೀಗ ಇವರ ಸಾಲಿಗೆ ನಿರ್ಮಲಾ ಸೀತಾರಾಮನ್ ಸೇರ್ಪಡೆಯಾಗಿದ್ದು, ಅತಿಹೆಚ್ಚು ಬಾರಿ ಬಜೆಟ್ (Budget) ಮಂಡಿಸಿ ಖ್ಯಾತಿ ಪಡೆದಿರುವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.
ಬಜೆಟ್ ಸಾಧ್ಯತೆಗಳು