ಸಬ್​ ಕಾ ಸಾಥ್,​ ಸಬ್ ​ಕಾ ವಿಕಾಸ್,​ ಸಬ್ ​ಕಾ ವಿಶ್ವಾಸ್ ​ಮಂತ್ರದಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ: ನಿರ್ಮಲಾ ಸೀತಾರಾಮನ್​​

Nirmala Sitharaman
Published on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಇಂದು ಮಧ್ಯಂತರ ಬಜೆಟ್​ ಮಂಡನೆ ಆರಂಭಿಸಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್‌ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ.

ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್‌ ಕೂಡ ಇದಾಗಿರಲಿದೆ. ನಿರ್ಮಲಾ ಸೀತಾರಾಮನ್ ಅವರ ಬಜೆಟ್​ ಭಾಷಣ, ಸರ್ವಾಂಗೀಣ, ಸರ್ವಾಂಗತ, ಸರ್ವ್ಯಾಪಕ​ ಮಂತ್ರ ಧ್ಯೇಯದಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕಥೆ ಸಾಕಷ್ಟು ಬದಲಾಗಿದೆ. ದೇಶದ ಜನರು ಬಹುಮತ ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂಧ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಆರ್ಥಿಕ ಪ್ರಗತಿಯನ್ನು ಕಂಡಿದೆ. ದೇಶದ ಭವಿಷ್ಯವೆ ನಮ್ಮ ಸರ್ಕಾರದ ಗರಿಯಾಗಿದೆ. ದೇಶದ ಜನರ ಅಭಿವೃದ್ಧಿ, ದೇಶದ ಅಭಿವೃದ್ಧಿ ಎನ್ನುವುದನ್ನು ನಾವು ಪಾಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕೆಂದ್ರ ಸರ್ಕಾ ಜನ ಪರ ಯೋಜನೆ ಜಾರಿ ಮಾಡಿದೆ. ಪ್ರತಿಯೊಂದು ಯೋಜನೆಯು ಪ್ರತಿಯೊಬ್ಬರಿಗೂ ತಲುಪಿಸುವ ಸರ್ಕಾರದ ಯೋಜನೆ

ಮಹಿಳೆಯರು ,ಬಡವರು, ಯುವಕರ, ಅನ್ನಧಾತರ ಅಭರವೃದ್ಧಿ ನಮ್ಮ ಗುರಿಯಾಗಿದ್ದು, ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಸಾಮಾಜಿಕ ನ್ಯಾಯ ಎನ್ನುವುದು ಕೇಲವ ಘೋಷಣೆಯಲ್ಲ ಇದು ಅಭಿವೃದ್ಧಿಯಾಗಿದೆ. ಜನರ ಅಭರವೃದ್ಧಿಯೇ ದೇಶದ ಅಭೃವೃದ್ಧಿಯಾಗಿರುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಜೆಟ್​ ಆಗಿದೆ ಎಂದಿದ್ದಾರೆ.

ರೈತರಿಗೆ ಕಾಲಕಾಲಕ್ಕೆ ತಕ್ಕಂತೆ ಬೆಂಬಲ ಬೆಲೆ ನೀಡಿದ್ದೇವೆ. 80 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಲಾಗಿದೆ. 10 ವರ್ಷದಲ್ಲಿ 25 ಕೋಟಿ ಬಡತನ ಮುಕ್ತವಾಗಿದೆ. ಬಡವರ ಅಭಿವೃದ್ಧಿ ಸರ್ಕಾರದ ಅಭಿವೃದ್ಧಿಯಾಗಿದೆ. ಯುವಕರನ್ನು ಸಶಕ್ತಕರಣಗೊಳಿಸುವುದು ಸಮ್ಮ ಸರ್ಕಾರದ ಧ್ಯೇಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಮಹಿಳೆಯರ ಹಿತ ರಕ್ಷಣೆಯಿಂದ ತ್ರಿಬಲ್​ ತಲಾಖ್​ ರದ್ದು ಮಾಡಲಾಗಿದೆ. ದೇಶದಲ್ಲಿ ಮಹಿಳಾ ಉದ್ಯಮಿಗಳ ಪ್ರಾಮಾನ ಗಣನೀಯವಾಗಿ ಹೆಚ್ಚಳವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಜೆಟ್​ ಆಗಿದೆ ಎಂದಿದ್ದಾರೆ.

 ಪ್ರಸಕ್ತ ಹಣಕಾಸು ವರ್ಷದಲ್ಲಿ 2023-24 ರಲ್ಲಿ ಭಾರತದ ಆರ್ಥಿಕತೆಯು ಶೇ.7.3 ಬೆಳವಣಿಗೆ ನಿರೀಕ್ಷಿಸಲಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತದ ಆರ್ಥಿಕತೆಯು 2022-23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net