ಸೆ.3ರಂದು ನಿರಾಕರಣೆ ಏಕವ್ಯಕ್ತಿ ರಂಗ ಪ್ರಯೋಗ

Chandrashekar shastri
ರಂಗಕರ್ಮಿ ಚಂದ್ರಶೇಖರ್ ಶಾಸ್ತ್ರಿ
Published on

ಶಿವಮೊಗ್ಗ: ಶಿವಮೊಗ್ಗ ಹೊಂಗಿರಣದಿಂದ ಏಕವ್ಯಕ್ತಿ ರಂಗ ಪ್ರಯೋಗ ‘ನಿರಾಕರಣೆ’ನಾಟಕ ಪ್ರದರ್ಶನ ಸೆ.3ರ ಸಂಜೆ 6.45ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಕರ್ಮಿ ಚಂದ್ರಶೇಖರ್ ಶಾಸ್ತ್ರಿ ತಿಳಿಸಿದರು.

ಲೇಖಕಿ ವೀಣಾ ಶಾಂತೇಶ್ವರ ಅವರ ಕಥೆ ಆಧರಸಿ ಡಾ. ಸಾಸ್ವೇಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದು ಆಯನೂರು ಮಾರ್ಗ ನೃತ್ಯ ಶಾಲೆಯ ಶ್ರುತಿ ಆದರ್ಶ ಅವರು ನಾಟಕ ಪ್ರಸ್ತುತಪಡಿಸುವರು. ಹರಿಗೆ ಗೋಪಾಲಸ್ವಾಮಿ, ಶಂಕರ ಬೆಳಲಕಟ್ಟೆ ಬೆಳಕು ನೀಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಣೇಶ್ ರಾವ್ ಎಲ್ಲೂರು ಸಂಗೀತ ನೀಡಿದ್ದು ತಮಟೆ ಜಗದೀಶ್ ಅವರ ಸಹಾಯ, ಸುಂದರೇಶ್ ಅವರ ರಂಗಸಜ್ಜಿಕೆ, ಚಂದ್ರಶೇಖರ್ ಶಾಸ್ತ್ರಿ ಅವರು ಪ್ರಚಾರ ವ್ಯವಸ್ಥೆ ಮಾಡಿದ್ದಾರೆ. ಶ್ರುತಿ ಆದರ್ಶ ಅವರು ಖಾಸಗಿ ಶಾಲೆ ಶಿಕ್ಷಕಿಯಾಗಿದ್ದು ಇದು ಅವರ ಮೊದಲ ರಂಗಪ್ರವೇಶವಾಗಿದೆ ಎಂದರು. ಕಲಾವಿದೆ ಶ್ರುತಿ ಆದರ್ಶ, ಸಂಗೀತ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ಗಣೇಶ್ ಸಹ್ಯಾದ್ರಿ, ಗಿರಿಧರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net