8, 9ರಂದು ನಮ್‌ಟೀಮ್ ಶಿವಮೊಗ್ಗದಿಂದ ನೀನಾಸಂ ನಾಟಕೋತ್ಸವ

Namteam Shivamogga
Published on

ಶಿವಮೊಗ್ಗ: ನಮ್‌ಟೀಮ್ ಶಿವಮೊಗ್ಗದಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಅ.8 ಮತ್ತು 9ರಂದು ನೀನಾಸಂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಮ್ ಟೀಮ್ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.

ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ನಮ್ ಟೀಮ್ ರಂಗ ತಂಡವು ಈ ಬಾರಿಯೂ ಆಯೋಜನೆ ಮಾಡಿದ್ದು, ಹೆಗ್ಗೋಡು ನೀನಾಸಂ ತಿರುಗಾಟದ ಕಲಾವಿದರು ನಾಟಕ ಪ್ರದರ್ಶಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅ.8ರ ಸಂಜೆ 7ಕ್ಕೆ ಬಾನು ಮುಷ್ತಾಕ್ ಅವರ ಕಥೆ ಆಧರಿಸಿದ ಹೃದಯದ ತೀರ್ಪು ನಾಟಕ ಪ್ರದರ್ಶಿಸುತ್ತಿದ್ದು, ಡಾ. ಎಂ.ಗಣೇಶ್ ಅವರ ರಂಗರೂಪ ಹಾಗೂ ನಿರ್ದೇಶನವಿದೆ. 9ರ ಸಂಜೆ 7ಕ್ಕೆ ಜಿ.ಶಂಕರ್ ಅವರ ಅವತರಣಮ್ ಭ್ರಾಂತಾಲಯಮ್ ನಾಟಕ ಪ್ರದರ್ಶನವಾಗಲಿದೆ. ಶಂಕರ್ ವೆಂಕಟೇಶ್ವರನ್ ನಾಟಕ ನಿರ್ದೇಶಿಸುವರು. ಸಭಾ ಕಾರ್ಯಕ್ರಮ ಇರುವುದಿಲ್ಲ. ನಾಟಕಗಳ ಪ್ರದರ್ಶನ ಮಾತ್ರ ಇರಲಿದೆ ಎಂದರು. ನಮ್ ಟೀಮ್ ಖಜಾಂಚಿ ಸಮನ್ವಯ ಕಾಶಿ, ಸದಸ್ಯೆ ನಂದಿನಿ ಸಾಗರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net