ನಿಮಿತ್ತಮಾತ್ರಂ ಭವ ಸವ್ಯಸಾಚಿನ್

Krishna Arjuna
Published on

ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ಭುಂಕ್ಷ್ವ ರಾಜ್ಯಂ ಸಮೃದ್ಧಂ|

ಮಯೈವೈತೇ ನಿಹತಾಃ ಪೂರ್ವಮೇವನಿಮಿತ್ತಮಾತ್ರಂ ಭವ ಸವ್ಯಸಾಚಿನ್ ||

ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಈ ಉಪದೇಶವನ್ನು ನೀಡಿರುವುದು ನಮಗೆ ಭಗವದ್ ಗೀತೆಯ 11ನೇಅಧ್ಯಾಯದ 33ನೇ ಶ್ಲೋಕದಲ್ಲಿ ದೊರೆಯುತ್ತದೆ- ನೀನು ಎದ್ದುನಿಂತು, ಕೀರ್ತಿಯನ್ನು ಗಳಿಸು. ಶತ್ರುಗಳನ್ನು ಜಯಿಸಿ, ಸಮೃದ್ಧ ರಾಜ್ಯವನ್ನು ಅನುಭವಿಸು. ಈ ಶತ್ರುಗಳನ್ನು ನಾನು ಈಗಾಗಲೇ ನಾಶಮಾಡಿದ್ದೇನೆ. ಓ ಸವ್ಯಸಾಚಿ (ಅರ್ಜುನನೇ), ನೀನು ನಿಮಿತ್ತಮಾತ್ರ ಆಗಿರು, ಎಂದು. ಈ ಮಾತನ್ನು ಉದಾಹರಿಸುತ್ತಾ ಎಲ್ಲಾ ಭಗವಂತನ ಇಚ್ಛೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಅವೆಲ್ಲ ಬೊಗಳೆಮಾತುಗಳು, ಪ್ರಯತ್ನವೇ ಪರಮೇಶ್ವರ ಎಂಬ ಮಾತಿನಂತೆ, ಎಲ್ಲವೂ ನಮ್ಮ ಮೇಲೆ, ನಾವು ಮಾಡುವ ಕೆಲಸದ ಮೇಲೆ ಮಾತ್ರನಿರ್ಭರವಾಗಿದೆ ಎಂದು ವಾದಿಸುತ್ತಾರೆ. ಇನ್ನು ಕೆಲವರು, ಭಗವಂತನ ಇಚ್ಛೆ ಹಾಗೂ ನಮ್ಮ ಪ್ರಯತ್ನ ಎರಡೂ ಆವಶ್ಯಕ.

ಇವೆರಡು ಪಕ್ಷಿಯ ಎರಡು ರಕ್ಕೆಗಳಿದ್ದಂತೆ ಎಂಬ ನಿಲುವನ್ನು ವ್ಯಕ್ತಪಡಿಸುತ್ತಾರೆ. ಹಾಗಾದರೆ ಯಾವುದು ಇವುಗಳಲ್ಲಿ ಸರಿ ಎಂಬ ಪ್ರಶ್ನೆ ಬಂದರೆ ನಮ್ಮ ಮನಃಸ್ಥಿತಿ ಹಾಗೂ ನಮ್ಮ ಸ್ವಭಾವಕ್ಕೆ ತಕ್ಕಂತೆ ನಾವು ನಿಲುವುಗಳನ್ನು ತೆಗೆದುಕೊಳ್ಳುತ್ತೇವೆ. ಮಹಾನ್ ಇತಿಹಾಸ ಗ್ರಂಥ ಮಹಾಭಾರತದಲ್ಲಿ ಬರ್ಭರೀಕನ ಪ್ರಸಂಗವೊಂದು ಬರುತ್ತದೆ. ಇವನು ಭೀಮಸೇನನ ಮೊಮ್ಮಗ ಹಾಗೂ ಘಟೋತ್ಕಚನ ಮಗ. ಚಿಕ್ಕ ವಯಸ್ಸಿನಲ್ಲಿಯೇ ಇವನು ಮಹಾ ಪರಾಕ್ರಮಿ. ಅಲ್ಲದೆ ಘೊರ ತಪಸ್ಸನ್ನು ಮಾಡಿ ಶಿವನಿಂದ ವಿಶೇಷವಾದ ಮೂರು ವರಗಳನ್ನು ಪಡೆದಿರುತ್ತಾನೆ. ಅದು, ಅವನ ಇಚ್ಛಾಮಾತ್ರದಿಂದ, ರಣರಂಗದಲ್ಲಿರುವ ಎಲ್ಲಾ ಶೂರರು, ವೀರರು, ಸೈನಿಕರಲ್ಲಿ ಮೊದಲನೇ ಬಾಣದಿಂದ ಯಾರನ್ನು ಸಂಹರಿಸಬೇಕೆಂದು ಗುರುತು ಮಾಡಬಲ್ಲ. ಎರಡನೇ ಬಾಣದಿಂದ ಯಾರನ್ನು ರಕ್ಷಿಸಬೇಕು ಎಂದು ಗುರುತಿಸಬಲ್ಲ. ಮೂರನೆಯದು ಒಂದೇ ಬಾಣದಿಂದ ಸಮಸ್ತ ಶತ್ರುಗಳ ಸಂಹಾರವನ್ನು ಮಾಡಬಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net