

ಮುಂದುವರಿದ ಭಾಗ...
ನೀಲಗಿರಿ ವಿರುದ್ಧ ಇತರ ಹೋರಾಟಗಳು:
ಪರಿಸರವಾದಿ ಮತ್ತು ಪರಿಸರ ಪತ್ರಕರ್ತ ನಾಗೇಶ ಹೆಗಡೆ ಅಂದಾಜು 30 ವರ್ಷಗಳ ಹಿಂದೆ ‘ನೆಡದಿರಿ ನೀಲಗಿರಿ’ ಎಂಬ ಕಿರುಪುಸ್ತಕವನ್ನು ರಚಿಸಿ ನೀಲಗಿರಿಯ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಎಸ್. ಆರ್. ಹಿರೇಮಠ್ ನೇತೃತ್ವದಲ್ಲಿ, 1984ರಲ್ಲಿ ತೀರ್ಥಹಳ್ಳಿ ಮತ್ತು ರಾಣಿಬೆನ್ನೂರಿನಲ್ಲಿ ಕಿತ್ತುಕೋ ಹಚ್ಚಿಕೋ ಚಳುವಳಿಯಾಗಿದೆ (ನೀಲಗಿರಿ ಮರವನ್ನು ಕಿತ್ತು ಇತರ ಸ್ಥಳೀಯ ಸಸಿಗಳನ್ನು ನೆಡುವುದು).
ಕರ್ನಾಟಕ ಸರ್ಕಾರವು, ಹರಿಹರ ಪಾಲಿಫೈಬರ್ ಕಂಪನಿಯ ಜಂಟಿ ಆಯೋಜನೆಯಲ್ಲಿ, 1984ರಲ್ಲಿ ಅಂದಾಜು 75,000 ಏಕರೆ ಗೋಮಾಳ ಭೂಮಿಯಲ್ಲಿ ನೀಲಗಿರಿ ಅರಣ್ಯ ಬೆಳೆಸಿ, ಪಲ್ಪ್ ವುಡ್ ಫ್ಯಾಕ್ಟರಿಗಳಿಗೆ ನೀಡಲೆಂದೇ ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಆರಂಭಿಸಿತ್ತು. ಡಾ.ಶಿವರಾಮ ಕಾರಂತರು, 1986ರಲ್ಲಿ ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಆ ನಿಗಮವೇ ಅಸಿಂಧುವೆಂದು ವಾದಿಸಿ, ಆ ನಿಗಮವನ್ನು ಸರ್ಕಾರವು ಬರ್ಖಾಸ್ತು ಮಾಡುವಲ್ಲಿ ಯಶಸ್ವಿಯಾದರು.