

ರಾಮನಗರ: ರಾಜ್ಯ ಜೆಡಿಎಸ್ ಯುವ ಟಕ ಅಧ್ಯಕ್ಷ ನಿಖಿಲ್ ಕುವಾರಸ್ವಾಮಿ ಜನ್ಮದಿನವನ್ನು ಜೆಡಿಎಸ್ ಕಾರ್ಯಕರ್ತರು ನಗರದ ಹಳೇ ಬಸ್ ನಿಲ್ದಾಣದಲ್ಲಿ ಭಾನುವಾರ ಅದ್ದೂರಿಯಾಗಿ ಆಚರಿಸಿದರು.
ತೆರೆದ ಕಾರಿನಲ್ಲಿ ರಾಮನಗರಕ್ಕೆ ಆಗಮಿಸಿದ ನಿಖಿಲ್ ಕುವಾರಸ್ವಾಮಿ ಅವರನ್ನು ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಪಕ್ಷದ ಕಾರ್ಯಕರ್ತರು, ಯುವಕರು ಸ್ವಾಗತಿಸಿದರು. ನಂತರ ಚಾಮುಂಡೇಶ್ವರಿ ದೇವಾಲಯ, ಬಲಮುರಿ ಗಣಪತಿ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಪೂಜೆ ಸಲ್ಲಿಸಿ ಬಾಲಗೇರಿ, ಕಾಮಣ್ಣನಗುಡಿ ವೃತ್ತ, ರೈಲ್ವೆ ನಿಲ್ದಾಣ ವೃತ್ತಗಳಲ್ಲಿ ಕಾರ್ಯಕರ್ತರು ನಿಖಿಲ್ ಕುವಾರಸ್ವಾಮಿ ಅವರಿಂದ ಕೇಕ್ ಕಟ್‌ವಾಡಿಸಿ ಹುಟ್ಟುಹಬ್ಬದ ಶುಭ ಕೋರಿದರು.
ರೈಲ್ವೆ ನಿಲ್ದಾಣದಿಂದ ವಿಶೇಷವಾಗಿ ಕುದುರೆ ಸಾರೋಟಿನಲ್ಲಿ ಹಳೇ ಬಸ್‌ನಿಲ್ದಾಣದವರೆಗೆ ಜನಪದ ಕಲಾಮೇಳದೊಂದಿಗೆ ಸೈನಿಕ ವೇಷ ತೊಟ್ಟ ಕುದುರೆ ಸವಾರರೊಂದಿಗೆ ಹಳೇ ಬಸ್‌ನಿಲ್ದಾಣದ ಬಳಿ ನಿರ್ಮಿಸಿದ್ದ ವೇದಿಕೆಗೆ ಕರೆತರಲಾಯಿತು. ಹಳೇ ಬಸ್ ನಿಲ್ದಾಣದ ಬಳಿ ವೃತ್ತದಲ್ಲಿರುವ ಹನುಮಂತಯ್ಯ ಪುತ್ಥಳಿಗೆ ನಿಖಿಲ್ ಕುವಾರಸ್ವಾಮಿ ವಾಲಾರ್ಪಣೆ ವಾಡಿದರು.
ಮಂಡ್ಯದಿಂದ ಬಂದ ಅಭಿವಾನಿಗಳು ಕಾರ್ಯಕರ್ತರು ಮೊದಲಿಗೆ ವೇದಿಕೆಯಲ್ಲಿ ಶುಭ ಕೋರಿದರು. ನಂತರ ರಾಮನಗರ ಕ್ಷೇತ್ರದ ಕಾರ್ಯಕರ್ತರು ಅಭಿವಾನಿಗಳು ಕೇಕ್‌ಕಟ್ ವಾಡಿಸಿ ನಿಖಿಲ್ ಕುವಾರಸ್ವಾಮಿ ಅವರಿಗೆ ಶುಭ ಕೋರಿದರು. ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು, ಅಭಿವಾನಿಗಳು, ಜೆಡಿಸ್ ಪಕ್ಷದ ನಗರಸಭೆ, ಗ್ರಾಪಂ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಜರಿದ್ದರು.
ವಿವಿಧೆಡೆ ಕೇಕ್ ಕಟ್: ಬಿಡದಿ ಬಿಟ್ಟ ನಂತರ ಕೆಂಪನಹಳ್ಳಿ, ವಾಯಗಾನಹಳ್ಳಿ, ಸಂಗನಬಸವನದೊಡ್ಡಿ, ವಾದಾಪುರ, ಬಸವನಪುರ ಗ್ರಾಮಗಳಲ್ಲಿ ಕಾರ್ಯಕರ್ತರು ಅಭಿವಾನಿಗಳು ಕೇಕ್‌ಕಟ್ ವಾಡಿಸಿ ಹೂವಿನಹಾರ ಹಾಕಿ ಸಿಹಿ ಹಂಚಿ ಶುಭ ಕೋರಿದರು.
ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು: ಹುಟ್ಟುಹಬ್ಬದ ಅಂಗವಾಗಿ ಹಳೇ ಬಸ್ ನಿಲ್ದಾಣದ ವೇದಿಕೆಯಲ್ಲಿ ಕೇಕ್ ಕಟ್ ವಾಡಿದ ನಿಖಿಲ್ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಿದರು. ಇದೇ ಸಂಧರ್ಭದಲ್ಲಿ ಬಾಲಗೇರಿ, ನಗರದ ಅಂಬೇಡ್ಕರ್ ಭವನದಲ್ಲಿ ಯುವ ಜೆಡಿಎಸ್ ಟಕದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ನಿಖಿಲ್ ಕುವಾರಸ್ವಾಮಿ ವಾತನಾಡಿ, ಪಕ್ಷದ ಕಾರ್ಯಕರ್ತರು, ಯುವಕರು ವಿಶೇಷವಾದ ಪ್ರೀತಿ ತೋರಿದ್ದೀರಿ. ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ನಿಮ್ಮಗಳ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ತಂದೆ ಹಾಗೂ ತಾಯಿ ಅವರಂತೆ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬೇಕೆನ್ನುವುದು ನನ್ನ ಉದ್ದೇಶವಾಗಿದೆ. ಬೆಂಬಲ ನೀಡುವಂತೆ ಮನವಿ ಮಾಡಿದರು.
ಮಂಡ್ಯ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ 36ನೇ ಜನ್ಮದಿನವನ್ನು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ನೇತೃತ್ವದಲ್ಲಿ ಭಾನುವಾರ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಆಚರಿಸಲಾಯಿತು.
ಮಂಡ್ಯ ವಿಧಾನಸಭಾ ಕ್ಷೇತ್ರದ ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿದ ರಾಮಚಂದ್ರು, ನಿಖಿಲ್ ಅವರಿಗೆ ಶುಭ ಹಾರೈಸಿದರು. ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ವೇಳೆ ಜೈಕಾರ ಮೊಳಗಿದವು.
ಈ ವೇಳೆ ಮಾತನಾಡಿದ ರಾಮಚಂದ್ರು, ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ನಿಖಿಲ್ ಯಶಸ್ಸು ಕಾಣುತ್ತಿದ್ದಾರೆ. ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರಂತೆ ಅಪಾರವಾದ ಜನಪರ ಕಾಳಜಿ ಹೊಂದಿದ್ದಾರೆ. ಬಡವರನ್ನು ಕಂಡರೆ ಮರುಗುವ ಮನಸ್ಸಿನ ನಿಖಿಲ್ ಅವರು ಯುವಕರ ಕಣ್ಮಣಿಯಾಗಿ ಬೆಳೆಯುತ್ತಿದ್ದಾರೆ ಎಂದರು.
ಸ್ಯಾಂಡಲ್‌ವುಡ್ ಯುವರಾಜ ಎಂದೇ ಅಭಿಮಾನಿಗಳ ಗೌರವಕ್ಕೆ ಪಾತ್ರರಾಗಿರುವ ನಟ ನಿಖಿಲ್‌ಕುಮಾರಸ್ವಾಮಿ ಅವರಿಗೆ ಆಯುರಾರೋಗ್ಯ, ರಾಜಕೀಯ ಭವಿಷ್ಯ ಉಜ್ವಲಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಖಿಲ್ ಅವರ ಹೆಸರು ಘೋಷಣೆಯಾಗಿದ್ದು, ಅವರ ಗೆಲುವಿಗೆ ನಾನು ಹಾಗೂ ನಮ್ಮ ಬೆಂಬಲಿಗರು ದುಡಿಯುತ್ತೇವೆ. ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಬಡವರ ಅಭಿವೃದ್ಧಿ ಮಾಡುವ ಕನಸು ಹೊಂದಿರುವ ನಿಖಿಲ್ ಅವರಿಗೆ ಕ್ಷೇತ್ರದ ಜನರು ಆರ್ಶೀವಾದ ಮಾಡಲಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಶಂಭು ಸೇವಾ ಟ್ರಸ್ಟ್ ಕಾರ್ಯದರ್ಶಿ ಸುರೇಶ್, ರಾಜಶೇಖರ್ ಇತರರು ಇದ್ದರು.