ಕೇತಿಗಾನಹಳ್ಳಿಯಲ್ಲಿ ನಡೆಯಲಿದೆ ಕೆಲವೇ ಆಮಂತ್ರಿತರ ಸಮ್ಮುಖದಲ್ಲಿ ನಿಖಿಲ್ - ರೇವತಿ ಮದುವೆ

nikel phot
Published on

ಬೆಂಗಳೂರು: ನಟ ನಿಖಿಲ್ ಮತ್ತು ರೇವತಿ ಮದುವೆಗೆ ರಾಮನಗರ ಜಿಲ್ಲೆ ಕೇತಿಗಾನಹಳ್ಳಿಯ ತೋಟದ ಮನೆ ಸಿಂಗಾರಗೊಂಡಿದೆ.

ಪುತ್ರನಿಗೆ ಅರಿಶಿಣ ನೀರಿನ ಸ್ನಾನ ಮಾಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ವರನ ಶಾಸ್ತ್ರವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ್ದಾರೆ.

ಶುಕ್ರವಾರ (ಏ.17) ಬೆಳಗ್ಗೆ 9 ಗಂಟೆಗೆ ಮುಹೂರ್ತ ನಿಗದಿಯಾಗಿದ್ದು, ಕುಟುಂಬ ವರ್ಗದಲ್ಲಿ ಕೆಲವರಿಗೆ ಮಾತ್ರವೇ ವಿವಾಹಕ್ಕೆ ಆಹ್ವಾನ ನೀಡಲಾಗಿದೆ. ಕರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಪಾಸ್ ಇದ್ದವರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ತೋಟದ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಂಪತಿ ಸೇರಿ ಕುಟುಂಬದ ಆಪ್ತ ಕೆಲ ಶಾಸಕರು ಮಾತ್ರವೇ ಮದುವೆಯಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net