ನಿಹಾರಿಕಾ ಕೊನಿಡೇಲ ಎರಡನೇ ಮದುವೆ… ಶಾಕಿಂಗ್ ಪೋಸ್ಟ್ ಹಾಕಿದ ಮಾಜಿ ಪತಿ!

niharika
Published on

ಹೈದರಾಬಾದ್​​: ಮೆಗಾಸ್ಟಾರ್​ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಖ್ಯಾತ ಉದ್ಯಮಿ ಪುತ್ರ ಜೆ.ವಿ. ಚೈತನ್ಯ ಅವರನ್ನು ವಿವಾಹವಾಗಿ ಸ್ವಲ್ಪ ದಿನಗಳ ನಂತರ ಬೇರ್ಪಟ್ಟಿದ್ದರು. ಆದರೆ ಅದಕ್ಕೆ ಕಾರಣ ಏನೆಂದು ಇನ್ನೂ ಗೊತ್ತಿಲ್ಲ. ಹೀಗಿರುವಾಗ ಇತ್ತೀಚೆಗಷ್ಟೇ ಎರಡನೇ ಮದುವೆಯಾಗುವುದಾಗಿ ಘೋಷಿಸಿದ್ದಾಳೆ. ಆಕೆಯ ಘೋಷಣೆಯ ನಂತರ, ಮಾಜಿ ಪತಿ ಚೈತನ್ಯ ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ಪೋಸ್ಟ್ ಮಾಡಿದ್ದಾರೆ.

ನಿಹಾರಿಕಾ ಕೊನಿಡೇಲಾ ಆ್ಯಂಕರ್ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು, ನಂತರ ಅನೇಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸಿದರು. ಹಿರಿಯರ ಸಮ್ಮುಖದಲ್ಲಿ ಚೈತನ್ಯ ಅವರನ್ನು ವಿವಾಹವಾದರು. ಇದು ಮುದ್ದಾದ ಜೋಡಿಗಳಲ್ಲಿ ಒಂದು ಎಂದೇ ಹೇಳಲಾಗುತ್ತಿತ್ತು. ಆದರೆ ಏನಾಯಿತೋ ಗೊತ್ತಿಲ್ಲ, ಕಳೆದ ವರ್ಷ ಈ ಜೋಡಿ ವಿಚ್ಛೇದನ ಪಡೆದುಕೊಂಡಿತು.

ಇದರಿಂದ ಮೆಗಾಸ್ಟಾರ್​ ಅಭಿಮಾನಿಗಳು ಕೂಡ ಕಂಗಾಲಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೊನ್ನಲಗಡ್ಡ ಚೈತನ್ಯ.. ವಿಚ್ಛೇದನ ಇಬ್ಬರ ನಡುವಿನ ವಿಚಾರ.. ಸಾರ್ವಜನಿಕವಾಗಿ ಚರ್ಚೆ ಬೇಡ ಎಂದಿದ್ದರು.

ಮಕ್ಕಳು ಬೇಕು: ಇತ್ತೀಚೆಗಷ್ಟೇ ನಿಹಾರಿಕಾ ಮತ್ತೊಮ್ಮೆ ತನ್ನ ಎರಡನೇ ಮದುವೆ ಬಗ್ಗೆ ಮಾತನಾಡಿದ್ದರು. ತನಗೆ ಮಕ್ಕಳೆಂದರೆ ಇಷ್ಟ, ಮಕ್ಕಳು ಬೇಕಾದರೆ ಮದುವೆಯಾಗಬೇಕು. ಹೀಗಾಗಿ ಎರಡನೇ ಮದುವೆಯಾಗುವುದಾಗಿ ಹೇಳಿದ್ದಳು. ಮದುವೆ ಯಾವಾಗ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಆಕೆಯ ಕಾಮೆಂಟ್‌ಗಳು ಬಿಸಿ ಬಿಸಿ ಚರ್ಚೆಗೆ ಗ್ರಾಸವಾದವು.

ಮಾಜಿ ಗಂಡನ ಪೋಸ್ಟ್: ನಿಹಾರಿಕಾ ಎರಡನೇ ಮದುವೆ ಬಗ್ಗೆ ಚೈತನ್ಯ ಸಾಮಾಜಿಕ ಮಾಧ್ಯಮದಲ್ಲಿ ಇಂಟ್ರೆಸ್ಟಿಂಗ್ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಆ ದೃಷ್ಟಿ ನಿಹಾರಿಕಾಗೆ ಖಂಡಿತಾ ಆಗಿದೆ. ವಿಶಾಲ ಆಗಸದಲ್ಲಿನ ಮೌನ, ​ನೀರೊಳಗಿರುವಾಗ ಅನುಭವಿಸುವ ನಿಶ್ಶಬ್ದತೆ, ಚಳಿ ಚಳಿಯ ರಾತ್ರಿಯಲ್ಲಿ ಆವರಿಸುವ ಮೌನ, ಚಪ್ಪಾಳೆ ತಟ್ಟುವ ಮುನ್ನವೇ ಕಾರ್ಯಕ್ರಮದ ಕೊನೆಯಲ್ಲಿ ಮೌನ. ಮತ್ತೇಕೆ... ನಿಮ್ಮ ಹೃದಯವನ್ನು ಮುರಿಯುವ ಏನನ್ನಾದರೂ ಕೇಳಿದಾಗ ಮೌನ, ​​ಜೀವನವು ನಿಮ್ಮನ್ನು ಆವರಿಸಿದಾಗ ನಿಮ್ಮ ಆಲೋಚನೆಗಳಲ್ಲಿ ನೀವು ಹಂಬಲಿಸುವ ಮೌನ, ​ಮೌನವು ನಿಮ್ಮ ಜೀವ ಶಕ್ತಿಯನ್ನು ಪ್ರಕೃತಿಯ ಶಕ್ತಿಯಿಂದ ಬೇರ್ಪಡಿಸುತ್ತದೆ. ನಿಮ್ಮ ಭೌತಿಕ ರೂಪವನ್ನು ತೊಡೆದುಹಾಕಿ, ಈ ಮೌನವು ದೇವರ ಮಾಧ್ಯಮವಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ ... ಮೌನ ... ಎಂದು ಕವನ ಬರೆದುಕೊಂಡಿದ್ದಾರೆ. ಈ ಮೌನ ಯಾರಿಗಾಗಿ ಎಂಬುದು ತಿಳಿಯಬೇಕಿದೆ. ಈ ಪೋಸ್ಟ್​ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net