ನೈಜೀರಿಯಾ ಪ್ರಜೆಗೆ 15 ವರ್ಷ ಜೈಲು ಶಿಕ್ಷೆ

Crime Logo
Published on

ಬೆಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುವಾಗ ಸಿಸಿಬಿ ಪೊಲೀಸರ ಸಿಕ್ಕಿಬಿದ್ದಿದ್ದ ನೈಜೀರಿಯಾ ಪ್ರಜೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ೧೫ ವರ್ಷಗಳ ಜೈಲು ಶಿಕ್ಷೆ ಹಾಗೂ ೧,೭೫೦೦ ರೂ. ದಂಡ ವಿಧಿಸಿ ನಗರದ ಎನ್.ಡಿ.ಪಿ.ಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ.

ನೈಜೀರಿಯಾ ಮೂಲದ ಹಾರ್ಲಿ ಒಕೊಂಕ್ವೊ ಶಿಕ್ಷೆಗೊಳಗಾದವನು.

೨೦೨೨ ರ ಅ.೨೦ ರ ಮಧ್ಯಾಹ್ನ ೧೨ ಗಂಟೆಯ ಸಮಯದಲ್ಲಿ ಕೆ.ಆರ್.ಪುರದ ಕಲ್ಕೆರೆ ಮುಖ್ಯರಸ್ತೆಯಲ್ಲಿ ನೈಜೀರಿಯಾ ಪ್ರಜೆಯು ಗ್ರಾಹಕರಿಗೆ ಮಾದಕ ವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ೨೦೦ ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್ ಮಾದಕ ವಸ್ತುಗಳ ಸಮೇತ ಬಂಧಿಸಿ, ನಂತರ ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿ ಹಾರ್ಲಿ ಒಕೊಂಕ್ವೊಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ.ವಿ. ಅಶ್ವಥ್‌ನಾರಾಯಣ ಅವರು ಸರ್ಕಾರದ ಪರ ಸಮರ್ಥವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net