ನೈಜೀರಿಯಾದಲ್ಲಿ ಕೂ ಕಲರವ

Koo appa
Published on

ಅಬುಜಾ: ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್​ ತಾಣ ಟ್ವಿಟರ್​ ಅನ್ನು ನೈಜೀರಿಯಾ ಸರ್ಕಾರ ಕಳೆದ ವಾರ ನಿಷೇಧಿಸಿದ್ದು, ಇದರ ಬೆನ್ನಿಗೆ ಭಾರತೀಯ ಮೈಕ್ರೋಬ್ಲಾಗಿಂಗ್​ ಸೈಟ್​ "ಕೂ'ವನ್ನು ಆರಂಭಿಸಲಾಗಿದೆ. ಸ್ಥಳಿಯ ಭಾಷೆಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ನೈಜೀರಿಯಾ ಸರ್ಕಾರದ ಅಧಿಕೃತ ಖಾತೆ ತೆರೆದಿದೆ.

ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಮಾಡಿದ ಟ್ವೀಟ್​ ಅನ್ನು ಟ್ವಿಟರ್​ ಡಿಲೀಟ್​ ಮಾಡಿತ್ತು. ಟ್ವಿಟರ್​ನ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಷರಾವನ್ನೂ ಅಲ್ಲಿ ಪ್ರಕಟಿಸಿತ್ತು. ಇದನ್ನು ನೈಜೀರಿಯಾ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುಳ್ಳು ಸುದ್ದಿ ಹರಡುವ ಮೂಲಕ ಹಿಂಸಾಚಾರಕ್ಕೆ ಕಾರಣವಾಗುವಂಥ ಟ್ವೀಟ್​ಗಳನ್ನು ಹಾಗೆಯೇ ಬಿಟ್ಟು, ಬೇಕಾ ಬಿಟ್ಟಿ ಕ್ರಮವನ್ನು ಟ್ವಿಟರ್​ ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರ ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net