ಸೆಲೆಬ್ರಿಟಿಗಳ ಜೀವನದಲ್ಲಿ ಇದು ತೀರ ಸಾಮಾನ್ಯ! ಹಾಟ್​ ಬ್ಯೂಟಿ ನಿಧಿ ಅಗರ್ವಾಲ್ ಓಪನ್ ಟಾಕ್​ | Nidhhi Agerwal

ವಿಜಯವಾಣಿ (2)
Published on

Nidhhi Agerwal: ತೆಲುಗು ಚಿತ್ರರಂಗದ ಹಾಟ್​ ಬ್ಯೂಟಿ, ಕ್ಯೂಟ್​ ನಟಿ ನಿಧಿ ಅಗರ್ವಾಲ್ ಪ್ರಸ್ತುತ ತಮ್ಮ ಮುಂಬರುವ 'ಹರಿ ಹರ ವೀರ ಮಲ್ಲು' ಸಿನಿಮಾದ ಪ್ರಚಾರದಲ್ಲಿ ಸಖತ್ ಬಿಜಿಯಾಗಿದ್ದಾರೆ. ಈ ಮಧ್ಯೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಪವನ್​ ಕಲ್ಯಾಣ್​ ಚಿತ್ರದ ಜೊತೆಗೆ ತಮ್ಮ ವೈಯಕ್ತಿಕ ಜೀವನ ಕುರಿತು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್​ ಅಭಿನಯದ "ಹರಿ ಹರ ವೀರ ಮಲ್ಲು" ಮತ್ತು ಡಾರ್ಲಿಂಗ್​ ಪ್ರಭಾಸ್ ನಟನೆಯ "ದಿ ರಾಜಾ ಸಾಬ್" ಸೇರಿದಂತೆ ಒಂದಷ್ಟು ಪ್ರಮುಖ ಚಿತ್ರಗಳಲ್ಲಿ ನಟಿಸಿರುವ ನಿಧಿ, ತಮ್ಮ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್​ಗೆ ಎದುರುನೋಡುತ್ತಿದ್ದಾರೆ. ಇದೆಲ್ಲದರ ನಡುವೆ ತಮಿಳು ನಟ ಸಿಂಭು ಜೊತೆಗೆ ಲವ್ವಿಡವ್ವಿ ಕುರಿತು ಕೇಳಲಾದ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿದ ನಟಿ, "ಇದೆಲ್ಲವೂ ಕೇವಲ ವದಂತಿಯಷ್ಟೇ" ಎಂದು ಸ್ಪಷ್ಟನೆ ನೀಡಿದರು.

ಈ ಹಿಂದೆ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ನಿಧಿಗೆ, ನಟ ಸಿಂಬು ಜೊತೆಗೆ ಪ್ರೇಮ ಸಂಬಂಧವಿದೆ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಇದಕ್ಕೆ ಉತ್ತರಿಸಿದ ನಿಧಿ ಅಗರ್ವಾಲ್​, "ಇದೆಲ್ಲವೂ ಕೇವಲ ಊಹಾಪೋಹ ಅಷ್ಟೇ. ಸೆಲೆಬ್ರಿಟಿಗಳ ಜೀವನದಲ್ಲಿ ವದಂತಿಗಳು ತೀರ ಸಾಮಾನ್ಯ. ಅದೊಂದು ಭಾಗ. ಅದನ್ನೆಲ್ಲ ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net