

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಟೆರರ್ ಫಂಡಿಂಗ್ನ ಹೊಸ ಕೇಸ್ ಸಂಬಂಧಿಸಿ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಅಧಿಕಾರಿಗಳು ಇಂದು ಶ್ರೀನಗರದ ಒಂಭತ್ತು ಕಡೆಗಳಲ್ಲಿ ಟ್ರಸ್ಟ್ ಮತ್ತು ಎನ್ಜಿಒ ಕಚೇರಿಗಳ ಮೇಲೆ ದಾಳಿ ನಡೆಸಿ, ಶೋಧ ಆರಂಭಿಸಿದ್ದಾರೆ.
ಪ್ರಮುಖ ಆಂಗ್ಲ ನ್ಯೂಸ್ ಪೇಪರ್ ಒಂದರ ಮಾಲೀಕರಿಗೆ ಸೇರಿದ ಟ್ರಸ್ಟ್ ಕೂಡ ಇದರಲ್ಲಿದೆ. ಅರೆಸೇನಾ ಪಡೆಯ ಸಹಕಾರದೊಂದಿಗೆ ಎನ್ಐಎ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. 2000ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಕನಿಷ್ಠ 3 ಎನ್ಜಿಒಗಳ ಕಚೇರಿ ಮೇಲೂ ದಾಳಿ ನಡೆದಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ.
ದೇಣಿಗೆ ಮೂಲ ಬಹಿರಂಗ ಪಡಿಸದೇ ಈ ಎನ್ಜಿಒಗಳು ಹಣವನ್ನು ವಿದೇಶದಿಂದ ಸ್ವೀಕರಿಸಿ ಕಾರ್ಯಾಚರಿಸುತ್ತಿವೆ. ಇವುಗಳು ಪಾಕ್ ಪ್ರಾಯೋಜಿತ ಎನ್ಜಿಒಗಳೆಂದು ಬಿಂಬಿತವಾಗಿವೆ. ಹೀಗಾಗಿ ಇವುಗಳ ಚಟುವಟಿಕೆ ಕೇಂದ್ರೀಯ ತನಿಖಾ ಸಂಸ್ಥೆಯ ನಿಗಾದಲ್ಲಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. (ಏಜೆನ್ಸೀಸ್)