ದಕ್ಷಿಣ ಕನ್ನಡ ವಿವಿಧ ಕಡೆ ಎನ್ಐಎ ದಾಳಿ, ಇಬ್ಬರು ವಶಕ್ಕೆ, ಪ್ರತಿಭಟನಾಕಾರರ ಬಂಧನ

IMG-20220922-WA0003
Published on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ವಿವಿಧ ಕಡೆ ಎನ್ಐಎ ದಾಳಿ ನಡೆಸಿ ಎಸ್ ಡಿಪಿಐ ಮುಖಂಡರಾದ ಅಬ್ದುಲ್ ಖಾದರ್ ಹಾಗೂ ಅಬೂಬಕ್ಕರ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ ಡಿಪಿಐ, ಪಿಎಫ್ಐ ಕಚೇರಿಗೆ, ಕೂಳೂರು, ಕಾವೂರು, ಉಪ್ಪಿನಂಗಡಿ, ಬಜಪೆ ಕಿನ್ನಿಪದವು, ವಿಟ್ಲ ಬೊಳಂತೂರು ಮೊದಲಾದ ಕಡೆ ಮುಖಂಡರ ಮನೆಗೆ, ಪುತ್ತೂರು ಹಾಗೂ ಬಂಟ್ವಾಳದ ಕಚೇರಿಗಳಿಗೂ ದಾಳಿ ನಡೆದಿದೆ. ಈ ಸಂದರ್ಭ ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನಲ್ಲಿ ದಾಳಿ ವೇಳೆ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರು ಜಮಾಯಿಸಿ ದಾಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದ ಪೊಲೀಸ್ ತಂಡಗಳು ದಾಳಿ ವೇಳೆ ಎನ್ ಐಎ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಬೆಳಗ್ಗೆ 6 ಗಂಟೆ ವೇಳೆಗೆ ಎನ್ಐಎ ದಾಳಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net