

ನವದೆಹಲಿ: ಯಾತ್ರಾರ್ಥಿಗಳಿಗೆ ಅಯೋಧ್ಯೆಯನ್ನು ಆಕರ್ಷಣೀಯ ಧಾರ್ಮಿಕ ತಾಣವನ್ನಾಗಿ ಮಾಡಲು ಪಟ್ಟಣದ ಸೌಂದರ್ಯೀಕರಣಕ್ಕೆ 55 ಕೋಟಿ ರೂ.ಗಳ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುಮೋದನೆ ನೀಡಿದೆ.
16 ಕಿ.ಮೀ ಬೈಪಾಸ್‌ನ ಸೌಂದರ್ಯೀಕರಣಕ್ಕಾಗಿ ಎನ್‌ಎಚ್‌ಎಐ, ಬುಧವಾರ ಬಿಡ್ ಕರೆಯಲು ಸಜ್ಜಾಗಿದೆ.
ಸೌಂದರ್ಯೀಕರಣ ಯೋಜನೆಯು ಹನುಮಂತ ದೇವರ ಪ್ರತಿಮೆ, ಸಣ್ಣ ಹೂ - ತೋಟಗಳು ಮತ್ತು ಕಾರಂಜಿಗಳನ್ನು ಒಳಗೊಂಡಿರುತ್ತದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಬೈಪಾಸ್ ಪ್ರಯಾಗರಾಜ್, ವಾರಾಣಸಿ ಮತ್ತು ದೇಶದ ಇತರ ಸ್ಥಳಗಳಿಗೆ ಅತ್ಯಗತ್ಯವಿರುವ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದ ಧಾರ್ಮಿಕ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ.