

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ಛಲ, ಏಕಾಗ್ರತೆ, ಗುರಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಬೆಂಗಳೂರು ಕುಮಾರಸ್ವಾಮಿ ಲೇಔಟ್ನ ಪತ್ರಿಕಾ ವಿತರಕಿ ಜಯಲಕ್ಷ್ಮೀ ಅವರೇ ಸಾಕ್ಷಿ. 25 ವರ್ಷಗಳಿಂದ ಪತಿ ಕಂಚಿಗಯ್ಯ ನಡೆಸಿಕೊಂಡು ಬರುತ್ತಿದ್ದ ಪತ್ರಿಕೆ ವಿತರಣೆಯನ್ನೇ ಅವರ ಪತ್ನಿ ಜಯಲಕ್ಷ್ಮೀ ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ ಕೇಂದ್ರಗಳಿಂದ 60ಕ್ಕೂ ಅಧಿಕ ಹಂಚಿಕೆದಾರರನ್ನು ಹೊಂದಿರುವ ಇವರು, ಈ ವೃತ್ತಿಯ ಆದಾಯದಿಂದಲೇ ಸ್ವಂತ ಮನೆ ನಿರ್ವಿುಸಿ ಕುಟುಂಬದ ಜತೆ ಸಂತೋಷದಿಂದ ಕಾಲಕಳೆಯುತ್ತಿದ್ದಾರೆ. ಮಗಳು ಎಂಬಿಎ ಮುಗಿಸಿ ಉಪನ್ಯಾಸಕಿಯಾಗಿದ್ದರೆ, ಮಗ ಇಂಜಿನಿಯರಿಂಗ್ ಓದಿದ್ದಾನೆ. ಯಾರೇ ಆಗಲಿ ಕಷ್ಟ ಪಟ್ಟು, ಶ್ರದ್ಧಾಭಕ್ತಿಯಿಂದ ಕೆಲಸವನ್ನು ಪ್ರೀತಿಸಿದಲ್ಲಿ ಪ್ರತಿಫಲ ಖಂಡಿತ ಸಿಗುತ್ತದೆ ಎನ್ನುತ್ತಾರೆ ಜಯಲಕ್ಷ್ಮೀ.