

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
‘ಮಂಗಳೂರು ನಗರದ ಮಧ್ಯೆ15 ಸೆಂಟ್ಸ್ ಜಮೀನು ಖರೀದಿಸಿ ಮನೆ ಕಟ್ಟಿಸಿದ್ದೇನೆ. ಇಬ್ಬರು ಮಕ್ಕಳು ಒಳ್ಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ, ಉತ್ತಮ ಆದಾಯವೂ ಇದೆ. ಪತ್ರಿಕೆ ವಿತರಣೆ ಆರಂಭಿಸಿದ ಬಳಿಕ ದೇವರು ಕೈ ಬಿಟ್ಟಿಲ್ಲ, ವೃತ್ತಿ ಜೀವನದಲ್ಲಿ ತೃಪ್ತಿಯೂ ಇದೆ..’ - ಇದು ಮಂಗಳೂರಿನಲ್ಲಿ ವಿಜಯವಾಣಿ ಸಹಿತ ವಿವಿಧ ಪತ್ರಿಕೆಗಳ ಏಜೆನ್ಸಿ ಪಡೆದು ವಿತರಿಸುತ್ತ ಎತ್ತರಕ್ಕೆ ಬೆಳೆದಿರುವ ರಾಜು ಕುಲಾಲ್ ಮನದ ಮಾತು. 30 ಜನರಿರುವ ಇವರ ತಂಡ ನಿತ್ಯ ವಿವಿಧ ಭಾಷೆಗಳ ಪತ್ರಿಕೆಗಳ 11 ಸಾವಿರ ಪ್ರತಿಗಳನ್ನು ಮನೆ, ಕಚೇರಿ, ವ್ಯಾಪಾರ ಕೇಂದ್ರಗಳಿಗೆ ತಲುಪಿಸುತ್ತಿದೆ. ಪತ್ರಿಕೆ ಪ್ರತಿಗಳನ್ನು ವಿತರಕರಿಗೆ ಹಂಚಲು ನೆರವಾಗಲಿಕ್ಕೇ ಮೂವರಿದ್ದಾರೆ. ವ್ಯವಹಾರದ ಲೆಕ್ಕ ನಿಭಾಯಿಸಲು ಪತ್ನಿ ಆಶಾ ನೆರವಾಗುತ್ತಾರೆ. ಸಂಘ-ಪರಿವಾರದ ನಿಕಟ ಸಂಪರ್ಕ ಹೊಂದಿರುವ ರಾಜು, 25 ವರ್ಷಗಳ ಹಿಂದೆ ಪತ್ರಿಕೆ ಏಜೆಂಟ್ ಜಯಣ್ಣ ಜತೆ ಮನೆಮನೆಗಳಿಗೆ ಪತ್ರಿಕೆ ಹಾಕುವ ಕೆಲಸಕ್ಕೆ ಇಳಿಯುವ ಮೂಲಕ ಈ ವೃತ್ತಿ ಜೀವನಕ್ಕೆ ಪ್ರವೇಶಿಸಿದ್ದರು.