ಕರೊನಾ ವಿರುದ್ಧದ ಹೋರಾಟಕ್ಕೆ ಸೋನಿಯಾ ಗಾಂಧಿ ನೀಡಿದ್ದ ಸಲಹೆಗೆ ಟೀಕೆ

Sonia Gandhi vvani
Published on

ಎರಡು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಜಾಹೀರಾತುಗಳನ್ನು ನೀಡದಂತೆ ಸಲಹೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎನ್​ಬಿಎ (ನ್ಯೂಸ್ ಬ್ರಾಡ್​ಕಾಸ್ಟಿಂಗ್ ಅಸೋಸಿಯೇಷನ್) ಅಸಮಾಧಾನ ವ್ಯಕ್ತಪಡಿಸಿದೆ.

ಕರೊನಾ ವೈರಸ್​ನ ಈ ಸಮಯದಲ್ಲಿ ಪತ್ರಕರ್ತರು ಪ್ರಾಣದ ಹಂಗು ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳಿಗೆ ಸರ್ಕಾರ ಜಾಹೀರಾತುಗಳನ್ನು ನಿಲ್ಲಿಸುವುದು ಸರಿಯಲ್ಲ ಎಂದು ಹೇಳಿದೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಕಾರಣ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂದು ಸೋನಿಯಾ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಆದರೆ ಇದರಿಂದ ಪತ್ರಕರ್ತರಿಗೆ ಕಷ್ಟವಾಗಲಿದೆ ಎಂದು ಎನ್​ಬಿಎ ತಿಳಿಸಿದೆ.

ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜಾಹೀರಾತುಗಳು ಸಂಖ್ಯೆ ಕಡಿಮೆಯಾಗಿದೆ. ಜತೆಯಲ್ಲಿ ಹಗಲು ರಾತ್ರಿಯೆನ್ನದೆ ದುಡಿಯುತ್ತಿರುವ ಪತ್ರಕರ್ತರ ಸುರಕ್ಷತೆಗಾಗಿ ಸಂಸ್ಥೆಗಳು ಸಾಕಷ್ಟು ಖರ್ಚು ಮಾಡುತ್ತಿವೆ. ಹೀಗಿರುವಾಗ ಜಾಹೀರಾತು ನಿಷೇಧಿಸುವುದು ಸಮಯೋಚಿತವಲ್ಲ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net