More

    ಕರೊನಾದಿಂದ ಬಚಾವ್​ ಆದ ಬಾಬಿ ಡಾಲ್​ ಸಿಂಗರ್​ ಕನ್ನಿಕಾ ಕಪೂರ್​ಗೆ ಮತ್ತೊಂದು ಸಂಕಷ್ಟ!

    ಲಖನೌ: ಸತತ ನಾಲ್ಕು ಬಾರಿ ಕರೊನಾ ಪಾಸಿಟಿವ್​ ವರದಿಯಿಂದ ಕಂಗಾಲಾಗಿ 5ನೇ ವರದಿಯಲ್ಲಿ ನೆಗೆಟಿವ್​ ಫಲಿತಾಂಶದಿಂದ ನಿರಾಳವಾಗಿದ್ದ ಬಾಬಿ ಡಾಲ್​ ಸಿಂಗರ್​ ಕನ್ನಿಕಾ ಕಪೂರ್​ಗೆ ಮುಂದಿನ ದಿನಗಳಲ್ಲಿ ಮತ್ತೊಂದು ಆತಂಕ ಎದುರಾಗುವ ಸಾಧ್ಯತೆ ಇದೆ.

    ಕರೊನಾದಿಂದ ಗುಣವಾಗಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರೂ ಸಹ ಮುಂದಿನ 14 ದಿನಗಳ ಕಾಲ ಮತ್ತೆ ಕನ್ನಿಕಾ ಅವರು ಕ್ವಾರಂಟೈನ್​ನಲ್ಲಿ ಇರಬೇಕಾಗಿದೆ. ಇದರ ನಡುವೆ ಲಖನೌ ಪೊಲೀಸರು ಯೋಜನೆಯೊಂದನ್ನು ರೂಪಿಸುತ್ತಿದ್ದಾರೆ. ಕನ್ನಿಕಾ ಅವರ ಕ್ವಾರಂಟೈನ್​ ಅವಧಿ ಮುಗಿದ ಬಳಿಕ ವಿಚಾರಣೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ.

    ಕರೊನಾ ಭೀತಿಯ ನಡುವೆ ಲಂಡನ್​ನಿಂದ ತವರಿಗೆ ಮರಳಿ ಟ್ರಾವೆಲ್​ ಇತಿಹಾಸವನ್ನು ಮರೆಮಾಚಿ ಗಣ್ಯ ವ್ಯಕ್ತಿಗಳಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದಕ್ಕೆ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್​ 269( ಜೀವಕ್ಕೆ ಮಾರಾಕವಾದ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವರ್ತನೆ) ಮತ್ತು ಸೆಕ್ಷನ್​ 270(ಸೋಂಕು ಹರಡುವ ಸಾಧ್ಯತೆಯಿದ್ದರೂ ಕೇಡು ಬಗೆಯುವ ವರ್ತನೆ)ರ ಅಡಿಯಲ್ಲಿ ಕನ್ನಿಕಾ ವಿರುದ್ಧ ಪ್ರಕರಣ ದಾಖಲಾಗಿದೆ.

    ಆರಂಭದಲ್ಲಿ ಕರೊನಾ ಸೋಂಕು ತಗುಲಿರುವುದನ್ನು ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ಕನ್ನಿಕಾ ಹಂಚಿಕೊಂಡಿದ್ದರು. ಆದರೂ ಕ್ವಾರಂಟೈನ್​ನಲ್ಲಿ ಇರದೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಕನ್ನಿಕಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್​ ಕೂಡ ಸೂಚಿಸಿದ್ದರು. ಅಲ್ಲದೆ, ಆಸ್ಪತ್ರೆಯಲ್ಲೂ ಕನ್ನಿಕಾ ಕಿರಿಕ್​ ಮಾಡಿಕೊಂಡು, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. (ಏಜೆನ್ಸೀಸ್​)

    ತಿಥಿ ಮಾಡಬೇಕಾಗಿರೋದು ಕರೊನಾಕ್ಕೆ … ಜನರಿಗೆ ಜಾಗೃತವಾಗಿರಲು ಕರೆ ನೀಡಿದ ಕ್ರೇಜಿ ಸ್ಟಾರ್

    ಮಾಸ್ಕ್ ಲುಕ್! ಫೋಟೋದಲ್ಲಿರುವವರಾರು ಗೊತ್ತಾ?; ಕರೊನಾ ಬಗ್ಗೆ ಏನಂದ್ರು ಈ ಸೂಪರ್​ಸ್ಟಾರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts